ಸ್ಯಾಂಡಲ್ ವುಡ್ ನ ಹಿರಿಯ ನಟ, ಪತ್ರಕರ್ತ ಸುರೇಶ್ ಚಂದ್ರ ಕೊರೊನಾಗೆ ಬಲಿ…

83
firstsuddi

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ಹಾಗೂ ಪತ್ರಕರ್ತ ಸುರೇಶ್ ಚಂದ್ರ ಅವರು ಕೊರೊನಾದಿಂದ ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಸುರೇಶ್ ಚಂದ್ರರವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಸುರೇಶ್ ಚಂದ್ರರವರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ವಿನಯ್ ಚಂದ್ರ ಹಾಗೂ ಅಭಯ್ ಚಂದ್ರರನ್ನು ಅಗಲಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡೆದಿದ್ದ ಸುರೇಶ್ ಚಂದ್ರರವರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 80ರ ದಶಕದಲ್ಲಿ ಪತ್ರಿಕೋದ್ಯಮದಲ್ಲಿ ಹೆಸರುವಾಸಿಯಾಗಿದ್ದ ಸುರೇಶ್ ಚಂದ್ರರವರು ಸಂಜೆ ವಾಣಿ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.

ಸುರೇಶ್ ಚಂದ್ರ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಮಧುಗಿರಿ ತಾಲೂಕು ಲಿಂಗೇನಹಳ್ಳಿಯಲ್ಲಿ ನಡೆಯಲಿದೆ ಎಂದು ಮಗ ವಿನಯ್ ಚಂದ್ರ ಅವರು ತಿಳಿಸಿದ್ದಾರೆ.