ಹಾಸನ : ಅಂದು ಅಧಿಕಾರಿ ಮೇಲೆ ಅಟ್ಯಾಕ್ ಇಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ…

985
firstsuddi

ಹಾಸನ : ಚೆಸ್ಕಾಂ ಸಹಾಯಕ ಕಾರ್ಯಪಾಲಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಸೇರಿದ್ದ ಸಹಾಯಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದರುವ ಘಟನೆ ಹಾಸನ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡ ಸಹಾಯಕ ಎಂದು ಗುರುತಿಸಲಾಗಿದ್ದು, 2019ರ ಜೂನ್ 14 ರಂದು ವಿದ್ಯುತ್ ಪ್ರಸರಣ ಪ್ಲಾಂಟ್ ಸ್ವಚ್ಚಗೊಳಿಸಲು ಹೇಳಿದ್ದಕ್ಕೆ ಮಂಜುನಾಥ್ ಅವರು ಚೆಸ್ಕಾಂ ನ ಸಹಾಯಕ ಕಾರ್ಯಪಾಲಕಿ ಸ್ವಾತಿದೀಕ್ಷಿತ್ ಅವರ ಮೇಲೆ ಕತ್ತಿಯಿಂದ ಮನಸ್ಸೋ ಇಚ್ಚೆ ಹಲ್ಲೆ ನಡೆಸಿ ಜೈಲು ಸೇರಿದ್ದರು. ಬಳಿಕ ಸಾವು ಬದುಕಿನ ನಡುವೆ ಹೋರಾಡಿದ ಸ್ವಾತಿದೀಕ್ಷಿತ್ ಅವರು ಅಪಾಯದಿಂದ ಪಾರಾಗಿದ್ದರು. ತಿಂಗಳ ಹಿಂದೆಯಷ್ಟೇ ಬೇಲ್ ಮೇಲೆ ಬಿಡುಗಡೆಯಾಗಿ ಬಂದ ಮಂಜುನಾಥ್ ಅವರು ನಿನ್ನೆ ರಾತ್ರಿ ಹಾಸನದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲು ಕುತ್ತಿಗೆ ಮೇಲೆ ಹರಿದ ಪರಿಣಾಮ ರುಂಡ ಮುಂಡ ಬೇರ್ಪಟ್ಟಿದ್ದು, ಹಾಸನ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.