ಹಾಸನ : ದೇವೇಗೌಡರ ನಾಮಫಲಕ ತೆರವು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ ಹಾಸನದ ಟ್ಯಾಕ್ಸಿ ಸ್ಟ್ಯಾಂಡ್ ದೇವೇಗೌಡರು ಉಳಿಸಿಕೊಟ್ಟ ಜಾಗ. ಟ್ಯಾಕ್ಸಿ ಚಾಲಕರಿಗೆ ಅನುಕೂಲ ಆಗಲಿ ಎಂದು ಉಳಿಸಿಕೊಟ್ಟಿದ್ದರು. ಅದಕ್ಕಾಗಿ ಚಾಲಕರು ಮತ್ತು ಮಾಲೀಕರು ಅಭಿಮಾನದಿಂದ ನಾಮಫಲಕ ಹಾಕಿದ್ದರು. ಟ್ಯಾಕ್ಸಿ ಸ್ಟ್ಯಾಂಡ್‍ನಲ್ಲಿ ಇದ್ದ ದೇವೇಗೌಡರ ನಾಮಫಲಕ ತೆರವು ಮಾಡಿದ್ದಕ್ಕೆ ಕಿಡಿಕಾರಿದ ಪ್ರಜ್ವಲ್ ರೇವಣ್ಣ. ಶಾಸಕ ಪ್ರೀತಮ್ ಗೌಡ ಅನುದಾನ ಕೊಟ್ಟಿರಬಹುದು. ಮೊದಲು ನಾವು ಕೊಟ್ಟಿದ್ದೆವು. ಹಾಸನದಲ್ಲಿ ಅಧಿಕಾರ ದುರುಪಯೋಗ ನಡೆಯುತ್ತಿದೆ. ದುಡ್ಡಿದೆ ಎಂಬ ಮಾತ್ರಕ್ಕೆ ಅನುಮತಿಯನ್ನು ಪಡೆಯದೇ ಹೇಗೆ ಕೆಲಸ ಮಾಡಿದರೂ ಟ್ಯಾಕ್ಸಿ ಸ್ಟ್ಯಾಂಡ್‍ನ ಎಡಭಾಗದ ಶೆಡ್ ನಿರ್ಮಾಣಕ್ಕೆ ಇನ್ನೂ ಕೂಡಾ ಅನುಮತಿ ಪಡೆದಿಲ್ಲ. ಹಾಗಾದರೆ, ದುಡ್ಡಿರುವವರು ನಗರಸಭೆ ಭೂಮಿಯಲ್ಲಿ ಏನು ಬೇಕಾದರೂ ಮಾಡಬಹುದಾ? ಸರಿಯಾದ ರೀತಿಯಲ್ಲಿ ಕೆಲಸ ಮಾಡಲಿ ಎಂದು ಶಾಸಕ ಪ್ರೀತಮ್ ಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.









