ತುಮಕೂರು : ನೀರಿನ ಸಂಪ್ಗೆ ಬಿದ್ದು 2 ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದ ಹನುಮಂತಪುರದಲ್ಲಿ ನಡೆದಿದೆ. ವಿಜಯೇಂದ್ರ ಹಾಗೂ ರಾಧಾ ದಂಪತಿಯ ಪುತ್ರಿ ಆಘನಾ(2) ಮೃತ ಮಗು ಎಂದು ಗುರುತಿಸಲಾಗಿದ್ದು, ಮಗು ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯ ಹೊರಗೆ ಆಟವಾಡುತ್ತಿದ್ದ ವೇಳೆ ಮನೆಯ ಮುಂಭಾಗದಲ್ಲಿದ್ದ ನೀರಿನ ಸಂಪ್ಗೆ ಬಿದ್ದಿದೆ. ಬಳಿಕ ತಾಯಿ ಹೊರಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಗ್ರಾಮಸ್ಥರೆಲ್ಲರು ಸೇರಿಕೊಂಡು ಮಗುವನ್ನು ಮೇಲಕ್ಕೆತ್ತಿ ದೇಹದಲ್ಲಿ ಸೇರಿದ್ದ ನೀರನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿದ್ದು, ಈ ಕುರಿತು ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










