ಬೆಳಗಾವಿ: ದ್ರಾಕ್ಷಿ ಹಣ್ಣನ್ನು ಸಾಗಿಸುತ್ತಿದ್ದ ಐಸರ್ ವಾಹನಯೊಂದು ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಜೇವರ್ಗಿ-ಸಂಕೇಶ್ವರ್ ರಾಜ್ಯ ಹೆದ್ದಾರಿ ಬಳಿ ತಡರಾತ್ರಿ ನಡೆದಿದೆ. ಸುವರ್ಣ ಧನ್ಯಪ್ಪಗೊಳ, ಮಾದೇವಿ ಪಡಸಲಗಿ ಹಾಗೂ ರಾಜು ನೇಸರ ಮೃತದುರ್ದೈವಿಗಳು. ಇವರು ವಿಜಯಪುರ ಜಿಲ್ಲೆಯ ಧನ್ಯಾಳ, ದಾಶ್ಯಾಳ ಹಾಗೂ ರಾಂಪುರದ ನಿವಾಸಿಗಳು ಎನ್ನಲಾಗಿದ್ದು, ಅಪಘಾತದಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










