ವಿದ್ಯುತ್​ ತಂತಿ ತಗುಲಿ ಬಾಲಕ ಸಾವು…

423

ಬೆಂಗಳೂರು: ವಿದ್ಯುತ್​ ತಂತಿ ತಗುಲಿ ಬಾಲಕನೋರ್ವ ಮೃತಪಟ್ಟಿರುವ ಘಟನೆ ಬಾಣಸವಾಡಿಯ ರಾಜ್‍ಕುಮಾರ್ ಪಾರ್ಕ್​ನಲ್ಲಿ ನಡೆದಿದೆ. ಉದಯ್ ಕುಮಾರ್( 7) ಮೃತ ದುರ್ದೈವಿ. ಉದಯ್ ಕುಮಾರ್ ರಾಜ್ ಕುಮಾರ್ ಪಾರ್ಕ್​ನಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತಗುಲಿ ಬಾಲಕ ಮೃತಪಟ್ಟಿದ್ದಾನೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.