ರಾಜಸ್ತಾನ: ಚುರುವಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶ ಸೇನೆಯ ಸುರಕ್ಷಿತ ಕೈಗಳಲ್ಲಿದೆ. ನಾವೆಲ್ಲರೂ ಪರಾಕ್ರಮಿ ಯೋಧರಿಗೆ ನಮನ ಸಲ್ಲಿಸೋಣ. ದೇಶದ ಜನರಿಗೆ ಭರವಸೆ ನೀಡುತ್ತೇನೆ ನಮ್ಮ ದೇಶ ಸುರಕ್ಷಿತರ ಕೈಯಲ್ಲಿದೆ. 2014 ರಲ್ಲಿ ನನ್ನ ಮನದಾಳದ ಮಾತನ್ನು ನಿಮ್ಮ ಮುಂದೆ ಹೇಳಿದ್ದೆ ಭಾರತ ದೇಶ ತಲೆತಗ್ಗಿಸಲು ಬಿಡುವುದಿಲ್ಲ. ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದು ಕೆಲಸ ಮಾಡುವೆ. ನಾವು ಎಲ್ಲ ಅಡೆತಡೆಗಳನ್ನು ಮೀರಿ ಮುನ್ನುಗ್ಗುತ್ತೇವೆ ಎಂದಿದ್ದಾರೆ.










