ರಾಯಚೂರು : ಪ್ರತಿಭಟನಾಕಾರರ ವಿರುದ್ಧ ಗರಂ ಆದ ಸಿಎಂ…

221
firstsuddi

ರಾಯಚೂರು : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕರೇಗುಡ್ಡ ಗ್ರಾಮಕ್ಕೆ ಗ್ರಾಮವಾಸ್ತವ್ಯ ಮಾಡಲೆಂದು ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಸಚಿವರ ವಿರುದ್ಧ ಸಿಟ್ಟಾಗಿದ್ದು, ಯರಮರಸ್ ಸರ್ಕೀಟ್ ಹೌಸ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಸಿಎಂ ಕುಮಾರಸ್ವಾಮಿ ಅವರ ಬಸ್ಸನ್ನು ಅಡ್ಡಗಟ್ಟಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಂಡರು. ಪ್ರತಿಭಟನಾಕಾರರ ಮನವಿಯನ್ನು ಕೇಳಿದ ಸಿಎಂ ಸಿಟ್ಟಾಗಿ ಮೋದಿ ಅವರಿಗೆ ಓಟ್ ಹಾಕಿ ಈಗಾ ನಮ್ಮ ಬಳಿ ಸಮಸ್ಯೆ ಬಗೆಹರಿಸುವಂತೆ ಕೇಳುತ್ತೀರ? ನಿಮಗೆಲ್ಲ ಮರ್ಯಾದೆ ಕೊಡಬೇಕಾ? ಲಾಠಿ ಚಾರ್ಜ್ ಮಾಡಬೇಕಾ ನಿಮಗೆ? ನಿಮ್ಮ ಗ್ರಾಮದಲ್ಲಿ ನಾನು ಗ್ರಾಮವಾಸ್ತವ್ಯವು ಮಾಡುವುದಿಲ್ಲ ಎಂದು ಪ್ರತಿಭಟನಾಕಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.