ತುಮಕೂರು : ವಿಧಾನಸೌಧದಲ್ಲಿ ಲಕ್ಷ್ಮಣ ಸೌಧಿ ಅವರು ಬ್ಲೂ ಫಿಲ್ಮ್ ನೋಡಿರುವುದು ದೇಶದ್ರೋಹವಲ್ಲ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಡಿಸಿಎಂ ಲಕ್ಷ್ಮಣ ಸೌಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಲಕ್ಷ್ಮಣ ಸೌಧಿ ಅವರು ವೀಡಿಯೋ ನೋಡಿರುವುದು ನೈತಿಕ ತಪ್ಪು, ಅವರು ಮಾಡಿದ ತಪ್ಪಿಗೆ ತಕ್ಕ ಶಾಸ್ತಿಯಾಗಿದೆ. ಹಾಗೆಂದು ಅದು ದೇಶದ್ರೋಹ ಕೆಲಸವಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದೇ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ನಾವೆಲ್ಲರೂ ದೇವಾಸ್ಥಾನ ಎಂದು ಭಾವಿಸುವ ವಿಧಾನ ಸೌಧದ ಮುಖ್ಯ ಧ್ವಾರದ ಬಾಗಿಲನ್ನು ಸಿದ್ದರಾಮಯ್ಯ ಅವರನ್ನು ತಮ್ಮ ಕಾಲಿನಿಂದ ಒದೆಯುವ ಮೂಲಕ ಪವಿತ್ರ ಸ್ಥಳಕ್ಕೆ ಅಪಚಾರ ಮಾಡಿರಲಿಲ್ಲವೇ? ಅಂದಿನ ಪೊಲೀಸ್ ಆಯುಕ್ತರಾಗಿದ್ದ ಶಂಕರ್ ಬಿದರಿ ಅವರ ಕಾಲರ್ ಹಿಡಿದು ದರ್ಪ ಮೆರೆದಿದ್ದರು. ಅಂಥವರು ಸಿಎಂ ಆಗಲಿಲ್ಲವೇ? ಹೀಗಿರುವಾಗ ಲಕ್ಷ್ಮಣ್ ಸವದಿ ಅವರಿಗೆ ಡಿಸಿಎಂ ಸ್ಥಾನ ನೀಡಿರುವುದರ ಕುರಿತು ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ ಎಂದರು.










