ಕಳಸ : ಸಂತ್ರಸ್ತ ರೈತ ಆತ್ಮಹತ್ಯೆ ಪ್ರಕರಣ ಹಿನ್ನೆಲೆ, ಕಳಸ ಪಟ್ಟಣ ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ…

771

ಮೂಡಿಗೆರೆ : ಸರ್ಕಾರದಿಂದ ಪರಿಹಾರ ವಿಳಂಬ ಹಾಗೂ ಕಳಸ ಸಮೀಪದ ಎಸ್.ಕೆ.ಮೇಗಲ್ ಗ್ರಾಮದ ರೈತ ಚಂದ್ರೇ ಗೌಡ ಆತ್ಮಹತ್ಯೆ ಮಾಡಿದ ಹಿನ್ನಲೆಯಲ್ಲಿ ಪಕ್ಷಾತೀತವಾಗಿ ಕಳಸ ಪಟ್ಟಣದಲ್ಲಿ ಸ್ವಯಂ ಘೋಷಿತ ಅಂಗಡಿ ಮುಂಗಟ್ಟು ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ಪ್ರತಿಭಟಣಾಕಾರರು ಮುಖ್ಯ ರಸ್ತೆ,ಮಹಾವೀರ ರಸ್ತೆಯಲ್ಲಿ ಅತಿವೃಷ್ಠಿಯಲ್ಲಿ ಹಾನಿಯಾದ ಪ್ರದೇಶಗಳಿಗೆ ಪರಿಹಾರ ನೀಡದೆ ಇರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುಧ್ಧ ಘೋಷನೆಗಳನ್ನು ಕೂಗುತ್ತಾ ಅಂಗಡಿ  ಮುಂಗಟ್ಟು ಬಂದ್ ಮಾಡಿಸುತ್ತಾ ಪ್ರತಿಭಟನೆಗಳನ್ನು ಮಾಡಿದರು.ಕೆ.ಎಂ.ರಸ್ತೆಯಲ್ಲಿ ಕೆಲ ಕಾಲ ಮೃತ ರೈತನ ಶವ ಇಟ್ಟು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್ ಮಾತನಾಡಿ ಈ ಭಾಗದಲ್ಲಿ ನೆರೆಯಿಂದ ಸಾಕಷ್ಟು ಹಾನಿಯಾಗಿದ್ದು,ರೈತರ ಬದುಕು ಸರ್ವನಾಶವಾಗಿದೆ.ಸರಕಾರ ರೈತರಿಗೆ ಪರಿಹಾರ ನೀಡದೆ ಇರುವ ಹಿನ್ನಲೆಯಲ್ಲಿ ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ.ಕಳೆದ ಕೆಲ ದಿನಗಳ ಹಿಂದೆಯೂ ಆತ್ಮ ಹತ್ಯೆ ಮಾಡಿಕೊಂಡ ರೈತ ಚನ್ನಪ್ಪ ಗೌಡರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷನೆ ಮಾಡಿ ಅದನ್ನು ಇನ್ನೂ ಕೂಡ ಕೊಡಲಿಲ್ಲ.ಕೂಡಲೇ ಸರಕಾರ ಅತಿವೃಷ್ಠಿಯಲ್ಲಿ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಕಳಸದಿಂದ ವಿದಾನಸೌದದವರೆಗೂ ಪಾದ ಯಾತ್ರೆ ಮಾಡಲಿದ್ದೇವೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಮಾತನಾಡಿ ಸರಕಾರದ ವಿಳಂಬ ನೀತಿ ದೋರಣೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ರೈತರ ನೋವಿಗೆ ಸ್ಪಂದಿಸಬೇಕಾದ ಸರಕಾರ ಮೌನಕ್ಕೆ ಜಾರಿದೆ.ಕೇವಲ ಪರಿಹಾರದ ಭರವಸೆಯನ್ನು ನೀಡುತ್ತಿದ್ದಾರೆ ಹೊರತು ಬಿಡಿಗಾಸು ಪರಿಹಾರ ಕೊಡುತ್ತಿಲ್ಲ.ಇದರಿಂದ ಮನೆ ಮಠ,ಜಮೀನು ಕಳೆದುಕೊಂಡ ರೈತರ ಬದುಕು ಕಷ್ಟವಾಗಿದೆ.ಕೂಡಲೇ ರಾಜ್ಯ ಮತ್ತು ಕೇಂದ್ರ ಸರಕಾರ ಅತಿವೃಷ್ಠಿಗೆ ಒಳಗಾದ ರೈತರ ಸಮಸ್ಯೆ ಸ್ಪಂದಿಸಬೇಕು ಇಲ್ಲವಾದಲ್ಲಿ ಹೋರಾಟದ ಸ್ವರೂಪವನ್ನು ಉಗ್ರವಾಗಿ ಮಾಡಲಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಳಸ ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ 15 ಸಾವಿರ ಹಣ,ಕೆಸಿಎ ಬ್ಯಾಂಕ್ ಅದ್ಯಕ್ಷ ಜಿ.ಕೆ.ಮಂಜಪ್ಪಯ್ಯ ಸಂಘದ ವತಿಯಿಂದ 25 ಸಾವಿರ ಹಣವನ್ನು ಮೃತರ ಕುಟುಂಬಕ್ಕೆ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಕೆ.ಸಿ.ಧರಣೇಂದ್ರ,ರಾಜೇಂದ್ರ ಪ್ರಸಾದ್,ಜ್ವಾಲನಯ್ಯ,ಭರತರಾಜ್,ಕೆ.ಸಿ.ಮಹೇಶ್,ಬ್ರಹ್ಮದೇವ,ಮಂಜುನಾಥ್,ವಿಶ್ವನಾಥ್,ಅನಿಲ್,ವೀರೇಂದ್ರ,ಅವಿನಾಶ್,ರಾಮಮೂರ್ತಿ,ರಿಜ್ವಾನ್,ಅನಿಲ್ ಡಿಸೋಜಾ ಇತರರು ಇದ್ದರು.