ಚಿಕ್ಕಮಗಳೂರು : ಹೆತ್ತ ಮಗುವನ್ನೇ ನಾಲೆಗೆ ಎಸೆದ ತಾಯಿ…

715
firstsuddi

ಚಿಕ್ಕಮಗಳೂರು : ಮೂರು ತಿಂಗಳ ಹಸುಗೂಸನ್ನು ಹೆತ್ತ ತಾಯಿಯೇ ನಾಲೆಗೆ ಎಸೆದಿರುವ ಅಮಾನವೀಯ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ. ಮೂರು ತಿಂಗಳ ತೇಜಸ್ ಮೃತ ಕಂದಮ್ಮ ಎಂದು ಗುರುತಿಸಲಾಗಿದ್ದು, ಕಡೂರು ತಾಲ್ಲೂಕಿನ ನಿಡಘಟ್ಟ ನಿವಾಸಿ ಕಮಲ ತನ್ನ ಪುಟ್ಟ ಕಂದಮ್ಮನನ್ನು ನಾಲೆಗೆ ಎಸೆದ ಕ್ರೂರಿ ತಾಯಿ. ಕಮಲ ಅವರು ಮಗುವನ್ನು ಎತ್ತಿಕೊಂಡು ನಾಲ್ಕು ಕಿ.ಮೀ ನಡೆದು ಬಂದು ನಾಲೆಗೆ ಎಸೆದಿದ್ದು, ನೀರು ಹರಿಯುತ್ತಿದ್ದ ರಭಸಕ್ಕೆ ಹಳಿಯೂರಿನಿಂದ 5 ಕಿ.ಮೀ ದೂರವಿರುವ ಬೆಟ್ಟತಾವರೆಕೆರೆ ನಾಲೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ಈ ಕುರಿತು ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.