ದಾವಣಗೆರೆ : ಕಟ್ಟಿಕೊಂಡ ಗಂಡನನ್ನೇ ಪತ್ನಿ ಆರು ಮಂದಿ ಯುವಕರೊಂದಿಗೆ ಸೇರಿ ಅಪಹರಿಸಿರುವ ಘಟನೆ ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸ್(41) ಪತ್ನಿಯಿಂದ ಅಪಹರಣಕ್ಕೊಳಗಾದ ಪತಿ ಎನ್ನಲಾಗಿದ್ದು, ಪತ್ನಿ ಸಂಗೀತಾ(29) ಈಗಾ ಹದಡಿ ಪೊಲೀಸರ ಅತಿಥಿಯಾಗಿದ್ದಾರೆ. ಜಮೀನು ಹಾಗೂ ಪೆಟ್ರೋಲ್ ಬಂಕ್ ನೋಡಿಕೊಂಡಿರುವ ಪತಿ ಶ್ರೀನಿವಾಸ್ ಅವರು ಪತ್ನಿ ನಡವಳಿಕೆ ಸರಿಯಿಲ್ಲ ಎಂಬ ಕಾರಣಕ್ಕೆ ಕಳೆದ 2 ವರ್ಷಗಳಿಂದ ಸಂಗೀತಾ ಅವರಿಂದ ದೂರವಿದ್ದರು. ಆದರೆ ಪತ್ನಿ ಸಂಗೀತಾ ಅವರಿಗೆ ಹಣದ ಅವಶ್ಯಕತೆ ಇದ್ದರಿಂದ ಕಳೆದ ಎರಡು ದಿನಗಳ ಹಿಂದೆ ಶ್ರೀನಿವಾಸ್ ಅವರು ಎಂದಿನಂತೆ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಪತ್ನಿ 6ಮಂದಿ ಸಹಚರರೊಂದಿಗೆ ಸೇರಿ ಪತಿಯನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹದಡಿ ಪೊಲೀಸರು ಪತ್ನಿ ಸಂಗೀತಾ ಸೇರಿದಂತೆ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಇನ್ನುಳಿದ ನಾಲ್ವರು ಯುವಕರು ಪರಾರಿಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.










