2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ…

190
firstsuddi

ಬೆಂಗಳೂರು : 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿಗೆ ರಾಘವೇಂದ್ರ ರಾಜ್‍ಕುಮಾರ್ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಗೆ ಮೇಘನಾ ರಾಜ್ ಆಯ್ಕೆಯಾಗಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾರ್ತಾ ಸಚಿವರು ಆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿಯನ್ನು ಪ್ರಕಟಿಸಿದರು. ರಾಘವೇಂದ್ರ ರಾಜ್‍ಕುಮಾರ್ ಅವರಿಗೆ “ಅಮ್ಮನ ಮನೆ” ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದ್ದು, ಮೇಘನಾ ರಾಜ್ ಅವರಿಗೆ “ಇರುವುದೆಲ್ಲವ ಬಿಟ್ಟು” ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಈ ಕೆಳಕಂಡಂತೆ ಇದೆ.

ಅತ್ಯುತ್ತಮ ಮೊದಲ ಚಿತ್ರ – ಆ ಕರಾಳ ರಾತ್ರಿ
ಅತ್ಯುತ್ತಮ ಎರಡನೇ ಚಿತ್ರ – ರಾಮನ ಸವಾರಿ
ಅತ್ಯುತ್ತಮ ಮೂರನೇ ಚಿತ್ರ – ಒಂದಲ್ಲ ಎರಡಲ್ಲ
ಅತ್ಯುತ್ತಮ ನಟ- ರಾಘವೇಂದ್ರ ರಾಜ್ಕುಮಾರ್(ಅಮ್ಮನ ಮನೆ)
ಅತ್ಯುತ್ತಮ ನಟಿ – ಮೇಘನಾ ರಾಜ್(ಇರುವುದೆಲ್ಲವ ಬಿಟ್ಟು)
ಅತ್ಯುತ್ತಮ ಸಂಗೀತ ನಿರ್ದೇಶನ – ರವಿ ಬಸ್ರೂರ್ (ಕೆಜಿಎಫ್)

ಅತ್ಯುತ್ತಮ ಮಕ್ಕಳ ಚಿತ್ರ – ಹೂವು ಬಳ್ಳಿ
ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ – ಬೆಳಕಿನ ಕನ್ನಡಿ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ದೇಯಿ ಬೈದೇತಿ(ತುಳು)
ಅತ್ಯುತ್ತಮ ಛಾಯಾಗ್ರಹಣ – ನವೀನ್ ಕುಮಾರ್(ಅಮ್ಮಚ್ಚಿಯೆಂಬ ನೆನಪು)
ಅತ್ಯುತ್ತಮ ಸಂಕಲನ – ಸುರೇಶ್ ಆರುಗ್ಮಂ(ತ್ರಾಟಕ)
ಅತ್ಯುತ್ತಮ ಬಾಲನಟ – ಮಾಸ್ಟರ್ ಆರ್ಯನ್(ರಾಮನ ಸವಾರಿ)
ಅತ್ಯುತ್ತಮ ಬಾಲನಟಿ – ಬೇಬಿ ಸಿಂಚನ(ಅಂದವಾದ)
ಅತ್ಯುತ್ತಮ ಕಲಾ ನಿರ್ದೆಶನ – ಶಿವಕುಮಾರ್ ಜೆ(ಕೆಜಿಎಫ್)
ಅತ್ಯುತ್ತಮ ಗೀತ ರಚನೆ – ಬರಗೂರು ರಾಮಚಂದ್ರಪ್ಪ(ಸಾವೇ.. ಸಾವೇ.. ಗೀತೆ)
ಅತ್ಯುತ್ತಮ ಹಿನ್ನಲೆ ಗಾಯಕಿ – ಕಲಾವತಿ ದಯಾನಂದ(ದೇಯಿ ಬೈದೇತಿ)
ಹಿನ್ನಲೆ ಗಾಯಕ – ಸಿದ್ಧಾರ್ಥ
ಅತ್ಯುತ್ತಮ ಪೋಷಕ ನಟ – ಬಾಲಾಜಿ ಮನೋಹರ್(ಚೂರಿಕಟ್ಟೆ)
ಅತ್ಯುತ್ತಮ ಪೋಷಕ ನಟಿ – ವೀಣಾ ಸುಂದರ್(ಆ ಕರಾಳ ರಾತ್ರಿ)

ಜೀವಮಾನ ಸಾಧನೆ, ಡಾ.ರಾಜ್ಕುಮಾರ್ ಪ್ರಶಸ್ತಿ – ಶ್ರೀನಿವಾಸ್ ಮೂರ್ತಿ
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ – ಪಿ. ಶೇಷಾದ್ರಿ, ನಿರ್ದೇಶಕ
ವಿಷ್ಣುವರ್ಧನ್ ಪ್ರಶಸ್ತಿ – ಬಿ.ಎಸ್. ಬಸವರಾಜು
ವಿಶೇಷ ಸಾಮಾಜಿಕ ಕಳಕಳಿ ಚಿತ್ರ – ಸಂತಕವಿ ಕನಕದಾಸರ ರಾಮಧಾನ್ಯ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
ಅತ್ಯುತ್ತಮ ಕತೆ – ನಾಯಿಗೆರೆ(ಹರೀಶ್.ಎಸ್)
ಅತ್ಯುತ್ತಮ ಚಿತ್ರಕತೆ – ಮೂಕಜ್ಜಿಯ ಕನಸುಗಳು(ಪಿ.ಶೇಷಾದ್ರಿ)
ಅತ್ಯುತ್ತಮ ಸಂಭಾಷಣೆ – ಶಿರಿಷಾ ಜೋಶಿ(ಸಾವಿತ್ರಿಬಾಯಿ ಫುಲೆ