ಚಿಕ್ಕಮಗಳೂರು : JCI ಸಂಸ್ಥೆ ವತಿಯಿಂದ ನಗರದ ಎಐಟಿ ಕಾಲೇಜಿನಲ್ಲಿ ನಾಯಕತ್ವ ತರಬೇತಿ ಶಿಬಿರ…

216
firstsuddi

ಚಿಕ್ಕಮಗಳೂರು : ಪ್ರಪಂಚದ ಎಲ್ಲಾ ಮೂಲೆಯಲ್ಲೂ ಹಬ್ಬಿರುವ JCI ಸಂಸ್ಥೆ ತಮ್ಮ ವ್ಯಕ್ತಿತ್ವ ವಿಕಾಸನ ಜೊತೆಗೆ ಸಾಮಾಜಿಕ ಸುಧಾರಣೆಯತ್ತ ಗಮನಹರಿಸಿ ಸುಧಾರಿಸುವ ನಿಟ್ಟಿನಲ್ಲಿ ಮಂಚೂಣಿಯಲ್ಲಿದೆ. ಇಂತಹ ನಾಯಕತ್ವ ಗುಣ ಕೈಗೂಡಿಸಿಕೊಳ್ಳುವಲ್ಲಿ JCI ಪಾತ್ರ ಹಿರಿದಿದೆ. ಇಂತಹ ನಾಯಕತ್ವ ತರಬೇತಿ ಶಿಬಿರ ಚಿಕ್ಕಮಗಳೂರಿನಲ್ಲಿ ಅದೂ ನಮ್ಮ ಎಐಟಿ ಕಾಲೇಜಿನಲ್ಲಿ ಆಯೋಜಿಸಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ. ತಾವೆಲ್ಲರೂ ಇಲ್ಲಿನ ತರಬೇತಿಯಿಂದ ಇನ್ನು ಹೆಚ್ಚಿನ ಸಮಾಜ ಸೇವೆಗೆ ಅನುಕೂಲವಾಗಲು ಆದಿಚುಂಚನಗಿರಿ ಸ್ವಾಮಿಯವರ ಆಶೀರ್ವಾದ ನಿಮ್ಮ ಮೇಲಿರುತ್ತದೆ ಎಂದು ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಯದೇವರವರು ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ 2020 JCI ವಲಯ 14ರ ಅಧಿಕಾರಿಗಳ ತರಭೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಯಲ 14ರ ಅಧ್ಯಕ್ಷರಾದ ಸಮತಾ ಮಿಸ್ಕಿತ್‍ರವರು ವ್ಯಕ್ತಿತ್ವ ವಿಕಸನ ಸಂಸ್ಥೆಯಾದ JCI ಸಂಸ್ಥೆ ಇಂದು ದೇಶಾದ್ಯಂತ ಹಲವಾರು ನಾಯಕರುಗಳನ್ನು ಕೊಡುಗೆಯಾಗಿ ನೀಡಿದೆ. ನಮ್ಮಲ್ಲಿ ತರಬೇತಿ ಪಡೆದ ಎಷ್ಟೋ ಮಂದಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುತ್ತಿದ್ದಾರೆ. ಇದರ ಜೊತೆಗೆ ನಾವು ಅನೇಕ ಸಮಾಜದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಜೊತೆಗೆ ಕೈ ಜೊಡಿಸುತ್ತಿದ್ದೇವೆ. ಎಲ್ಲ ಯುವಕರು ನಮ್ಮ ಸಂಸ್ಥೆಯ ಜೊತೆಗೆ ಹೆಮ್ಮೆಯಿಂದ ಕೈ ಜೋಡಿಸಿ ಎಂದು ಹೇಳಿದರು.

ನಗರದ ಬಿ.ಜಿ.ಎಸ್. ಆಡಿಟೋರಿಯಂ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಚಿಕ್ಕಮಗಳೂರು ಇಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿತ್ತು. ರಾಷ್ಟ್ರೀಯ ತರಬೇತುದಾರರಾದ ಜೇಸಿ ರಾಜೇಂದ್ರಭಟ್ ಅವರ ನೇತೃತ್ವದ ತಂಡದಲ್ಲಿ ಜೇಸಿ. ಸಂದೀಪ್ ವಿಜಯನ್, ಜೇಸಿ. ಜೆಯಚಂದರ್, ಜೇಸಿ ಮುರಳಿದರ್ ಅವರು ವಲಯ 14 ರ ಎಲ್ಲ ಘಟಕಾಧಿಕಾರಿಗಳಿಗೆ ಜೇಸಿ ಸಂಸ್ತೆಯ ಉದ್ದೇಶ, ಅವಕಾಶ, ಅಧಿಕಾರಿಗಳಾಗಿ ತಮ್ಮ ಕರ್ತವ್ಯಗಳ ಬಗ್ಗೆ ಸುದೀರ್ಘವಾಗಿ ತರಬೇತಿ ನೀಡಿ ಸ್ಪೂರ್ತಿ ನೀಡಿದರು. ಮೊಟ್ಟ ಮೊದಲ ಬಾರಿಗೆ ವಲಯ ಕಾರ್ಯಕ್ರಮದ ಆತಿಥ್ಯವನ್ನು ಜೇಸಿಐ ಚಿಕ್ಕಮಗಳೂರು ಮಲ್ನಾಡ್ ವಹಿಸಿದ್ದು ಒಂದು ಜೀವಮಾನದ ಶ್ರೇಷ್ಠ ಅನುಭವ ಎಂದು ಘಟಕ ಅಧ್ಯಕ್ಷರಾದ ಜೇಸಿ ವಿಜಯ ಕುಮಾರ್ ಅಭಿಪ್ರಾಯ ಪಟ್ಟರು. ತರಬೇತಿಯಲ್ಲಿ 150 ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ ವಲಯ 14 ನಿಕಟಪೂರ್ವ ಅಧ್ಯಕ್ಷರಾದ ಜೆಫಿನ್ ಜಾಯ್, ಜೇಸಿಐ ಸೆನೆಟರ್ ನವೀನ್ ಲಾಯ್ಡ್ ಮಿಸ್ಕಿತ್, ರಾಷ್ಟ್ರೀಯ ಖಜಾಂಚಿಗಳಾದ ಜೇಸಿ. ವಿಕಾಸ್ ಗುಗ್ಲಿಯಾ, ಜೇಸಿ ಭದ್ರೀಶ್, ಜೇಸಿ ಮದೋಶ್ ಪೂವಯ್ಯ ವಲಯ ಕಾರ್ಯದರ್ಶಿ ರಘುನಂದನ್, ಜೇಸಿ ಅನಿಲ್ ಆನಂದ್, ಕಾರ್ಯದರ್ಶಿ ನೀತನ್ ಡಿಸೋಜ, ಕೃಷ್ಣಮೂರ್ತಿ, ಚೈತ್ರ, ಗಿರಿಧರ್,ಚಂದ್ರಶೇಕರ್, ಶೋಭ ಭಾಸ್ಕರ್, ಗುರುಮೂರ್ತಿ,ಪ್ರದೀಪ್, ವಿಶ್ವಾಸ್, ಜಯಚಂದ್ರ. ಮುಂತಾದವರು ಉಪಸ್ಥಿತರಿದ್ದರು.