ಹೊಟ್ಟೆ ನೋವು ತಾಳಲಾಗದೆ ಯುವತಿ ಆತ್ಮಹತ್ಯೆಗೆ ಶರಣು…

267
firstsuddi

ಮಡಿಕೇರಿ : ಹೊಟ್ಟೆ ನೋವು ತಾಳಲಾಗದೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಳ್ಳೇಕೆರೆಯಲ್ಲಿ ನಡೆದಿದೆ. ರಂಜಿತಾ(17) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದ್ದು, ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ ಅವರು ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇದರಿಂದ ನೋವನ್ನು ತಾಳಲಾಗದೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನ ಕುಟುಂಬದಲ್ಲಿ ನಡೆಯುವುದನ್ನು ನೋಡಿಯೇ ನಾನು ಈ ತೀರ್ಮಾನ ತೆಗೆದುಕೊಂಡಿದ್ದೇನೆ. ನಾನು ಎಲ್ಲರಿಗೂ ಕಷ್ಟವನ್ನು ಕೊಡುತ್ತಿದ್ದೇನೆ. ನನ್ನಿಂದ ಯಾರು ಕಷ್ಟಪಡಬಾರದು. ಅಪ್ಪ ಅಮ್ಮ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನ್ನ ಎಲ್ಲಾ ಸ್ನೇಹಿತರನ್ನು ಮಿಸಿ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.