ಹಾಸನ : ಶೂಟೌಟ್ ಮಾಡಿ ಯುವಕನನ್ನು ಕೊಲೆಗೈದ ದುಷ್ಕರ್ಮಿಗಳು…

169
firstsuddi

ಹಾಸನ : ದುಷ್ಕರ್ಮಿಗಳು ಯುವಕನನ್ನು ಶೂಟೌಟ್ ಮಾಡಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬೇಡಿಗನಹಳ್ಳಿಯಲ್ಲಿ ನಡೆದಿದೆ. ಗೌಡಗೆರೆ ಸಮೀಪದ ಹೊಸೂರು ಗ್ರಾಮದ ನಿವಾಸಿ ಪುನೀತ್(28) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಮೃತ ಯುವಕ ತನ್ನ ದೊಡ್ಡಪ್ಪನ ಮನೆಯಲ್ಲಿ ಊಟ ಮುಗಿಸಿಕೊಂಡು ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಬೇಡಿಗನಹಳ್ಳಿಯ ಕೆರೆ ಏರಿ ಮೇಲೆ ದುಷ್ಕರ್ಮಿಗಳು ಶೂಟೌಟ್ ಮಾಡಿ ಯುವಕನನ್ನು ಹತ್ಯೆ ಮಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.