ಮೂಡಿಗೆರೆ : ತಡೆಗೋಡೆ ಇಲ್ಲದೆ ಕಾಫಿತೋಟಕ್ಕೆ ಬಿದ್ದ ಕಾರು-ಚಾಲಕ ಪ್ರಾಣಾಪಾಯದಿಂದ ಪಾರು…

185
firstsuddi

ಕೊಟ್ಟಿಗೆಹಾರ ; ತಡೆಗೋಡೆಯಿಲ್ಲದೆ ರಸ್ತೆ ಬದಿಯ ಕಾಫಿತೋಟಕ್ಕೆ ತೋಟಕ್ಕೆ ಕಾರು ಬಿದ್ದಿರುವ ಘಟನೆ ಜಾವಳಿ ಎಸ್ಟೇಟ್ ಬಳಿ ನಡೆದಿದೆ. ಜಾವಳಿಯ ಗಿರೀಶ್ ಎಂಬುವವರು ಕಾರಿನಲ್ಲಿ ಮೂಡಿಗೆರೆಗೆ ಹೋಗುವ ವೇಳೆ ಜಾವಳಿ ಎಸ್ಟೇಟ್ ಸಮೀಪ ಅಪಘಾತ ಸಂಭವಿಸಿದ್ದು, ಗಿರೀಶ್ ಅವರು ಸಣ್ಣಪುಟ್ಟ ತರಚು ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಡೆಗೋಡೆ ಇಲ್ಲದೇ ಇರುವುದರಿಂದ ಅಪಘಾತ ಸಂಭವಿಸಿದ್ದು ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.