ಕಳಸ : ಶ್ರೀ ಕಲಶೇಶ್ವರಸ್ವಾಮಿಯವರ ಧನುರ್ಮಾಸ ರಥೋತ್ಸವ…

283
firstsuddi

ಕಳಸ : ಶ್ರೀ ಕಲಶೇಶ್ವರಸ್ವಾಮಿಯವರ ಧನುರ್ಮಾಸ ರಥೋತ್ಸವ ನಡೆಯಿತು. ಪ್ರತೀ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡ ರಥೋತ್ಸವದಲ್ಲಿ ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
ಇಂದು ಮಧ್ಯಾಹ್ನ ಶ್ರೀ ಕಲಶೇಶ್ವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಛತ್ರಿ ಚಾಮರ ಮಂಗಳ ವಾಧ್ಯಗಳೊಂದಿಗೆ ದೇವಸ್ಥಾನದಲ್ಲಿ ಸುತ್ತು ಸೇವೆ ನಡೆಸಿ ನಂತರ ಸಣ್ಣ ರಥದಲ್ಲಿ ಇಟ್ಟು ಪೂಜಿಸಲಾಯಿತು.
ನಂತರ ಭಕ್ತಾಧಿಗಳು ತೆಂಗಿನಕಾಯಿಯನ್ನು ರಥದ ಚಕ್ರಗಳಿಗೆ ಹೊಡೆದು, ರೈತರು ಬೆಳೆದ ಕಾಳು ಮೆಣಸು, ಏಲಕ್ಕಿ, ಕಾಫಿ ಬೀಜ ಇತ್ಯಾದಿ ಬೆಳೆದ ದವಸ ಧಾನ್ಯಗಳನ್ನು ರಥಕ್ಕೆ ಎಸೆದು ನಂತರ ರಥವನ್ನು ಎಳೆಯಲಾಯಿತು.
ಕಳಸ ಮುಖ್ಯ ರಥ ಬೀದಿಯಲ್ಲಿ ಮಂಜಿನಕಟ್ಟೆ ತನಕ ರಥವನ್ನು ಎಳೆದು ನಂತರ ವಾಪಾಸ್ಸು ಕಲಶೇಶ್ವರ ದೇವಸ್ಥಾನದವರೆಗೆ ರಥೋತ್ಸವ ನಡೆಸಲಾಯಿತು. ಈ ಸಂದರ್ಭದಲ್ಲಿ ಇಕ್ಕೆಲಗಳಲ್ಲಿ ಭಕ್ತಾದಿಗಳು ಹಣ್ಣು ಕಾಯಿ ಸಮರ್ಪಿಸಿದರು.
ನಾಳೆ ಕುಂಕುಮೋತ್ಸವ, ಕೋಟಿ ತೀರ್ಥದಲ್ಲಿ ಅವಭೃತ ಸ್ನಾನ ನಡೆದು, ಶನಿವಾರ ಸಂಪ್ರೋಕ್ಷಣೆಯೊಂದಿಗೆ ಧನುರ್ಮಾಸದ ರಥೋತ್ಸವದ ಧಾರ್ಮಿಕ ಕಾರ್ಯಕ್ರಮ ಮುಗಿಯಲಿದೆ.