ಬೆಂಗಳೂರು : ನಗರದ ಒಂದೇ ಕುಟುಂಬದ ಐವರ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಿನ್ನೆ ಸಿಕ್ಕ ಮೃತರ ಡೆತ್ ನೋಟ್ ನಲ್ಲಿ ತಂದೆ ವಿರುದ್ಧವೇ ಆರೋಪಿಸಿ ಆತ್ಮಹತ್ಯೆಗೆ ಅವರೇ ಕಾರಣ ಎಂದು ಮಕ್ಕಳು ತಮ್ಮ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.
ನಮ್ಮಪ್ಪನಿಗೆ ಐವರು ಮಹಿಳೆಯರ ಜೊತೆ ಅಕ್ರಮ ಸಂಬಂಧ ಇತ್ತು ಎಂದು ಮೃತ ಪುತ್ರ ಮಧುಸಾಗರ್ ಆರೋಪಿಸಿದ್ದಾರೆ. ನಮ್ಮ ಏರಿಯಾದಲ್ಲೇ ಇರುವ ಓರ್ವ ಮಹಿಳೆ ಜೊತೆ ಸಂಪರ್ಕ ಇದೆ. ತಾನು ಸಂಬಂಧ ಹೊಂದಿದ್ದ ಮಹಿಳೆಯ ಮಗಳನ್ನೇ ಮದುವೆ ಆಗುವಂತೆ ಒತ್ತಾಯ ಮಾಡಿದ್ದಾನೆ. ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಿದ್ದನು. ನನ್ನ ತಂದೆ ಸ್ಯಾಡಿಸ್ಟ್, ಕಾಮುಕ, ಕುಡುಕ. ತನ್ನ ಕಚೇರಿಯಲ್ಲಿ ಓರ್ವ ಮಹಿಳೆ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಹಲವು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಹಲವು ಮಹಿಳೆಯರನ್ನು ಟ್ರ್ಯಾಪ್ ಮಾಡಿ ಸಂಬಂಧ ಹೊಂದಿದ್ದರು. ಅಪ್ಪನ ಅನೈತಿಕ ಸಂಬಂಧಕ್ಕೆ ಬೇಸತ್ತು ಅಪ್ಪನಿಂದ ನಾನು, ಅಮ್ಮ ದೂರ ಉಳಿದಿದ್ದೆವು. ನಮ್ಮ ಅಮ್ಮ, ಅಕ್ಕಂದಿರಿಗೆ ಕಿರುಕುಳ ನೀಡುತ್ತಿದ್ದರು. ಈ ಮೂಲಕ ಅಕ್ಕಂದಿರ ಜೀವನವನ್ನೂ ಹಾಳು ಮಾಡಿದ್ದಾರೆ.
ನನ್ನ ತಂದೆ ಕಾಮುಕ, ಅಪ್ಪನ ಎಲ್ಲಾ ಕೃತ್ಯದ ಬಗ್ಗೆ ಅಮ್ಮನಿಗೆ ಗೊತ್ತಿತ್ತು. ಇದೇ ವಿಚಾರವಾಗಿ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆಗಳಾಗಿವೆ. ಅಪ್ಪನ ಕಿರುಕುಳದಿಂದ ಅಮ್ಮನಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆಯನ್ನು ಕೂಡ ನೀಡಲಾಗಿತ್ತು. ಈ ಹಿಂದೆ ಪೊಲೀಸ್ ಠಾಣೆಯಲ್ಲೂ ಅಪ್ಪನ ವಿರುದ್ಧ ಕೇಸ್ ದಾಖಲಾಗಿತ್ತು. 2007ರಲ್ಲಿ ಇದೇ ವಿಚಾರಕ್ಕೆ ಅಪ್ಪನ ಮೇಲೆ ಹಲ್ಲೆ ನಡೆದಿತ್ತು.
ನಮ್ಮನ್ನು ಮನೆಯೊಳಗೆ ಕೂಡಿ ಹಾಕಿ ಅಫೀಸ್ಗೆ ಹೋಗ್ತಿದ್ದರು. ನಮ್ಮಮ್ಮನ ಅಸಹಾಯಕತೆಯನ್ನೇ ನಮ್ಮಪ್ಪ ಬಳಸಿಕೊಂಡು ಆಕೆಗೆ ಕಿರುಕುಳ ನೀಡ್ತಿದ್ದರು. ದಿನಾ ಕುಡಿದು ಬಂದು ಗಲಾಟೆ ಮಾಡ್ತಿದ್ದರು. ನಮ್ಮಪ್ಪನ ಜೊತೆ ನಾವು ಊಟನೂ ಮಾಡ್ತಿರಲಿಲ್ಲ. ಕೆಲಸ ಬಿಡುವಂತೆ ನನಗೆ, ನನ್ನ ಸಹೋದರರಿಗೆ ಕಿರುಕುಳ ಕೊಡ್ತಿದ್ದರು. ಅಪ್ಪನ ಕಿರುಕುಳ ತಾಳಲಾರದೇ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದೆ. ನಾನು, ಅಮ್ಮ, ಸಹೋದರರಿರನ್ನು ಬೇರೆ ಬೇರೆ ಇಟ್ಟಿದ್ದರು. ನಮ್ಮ ಅಪ್ಪನ ಕಾಟದಿಂದ ನನ್ನ ಸಹೋದರರಿಯ ಶಿಕ್ಷಣ ಒಂದು ವರ್ಷ ಹಾಳಾಗಿತ್ತು.
ನನ್ನ ಮೊದಲ ಸಹೋದರಿಗೆ ಆಕೆಯ ಅತ್ತೆ ಮತ್ತು ಮಾವ, ಗಂಡನಿಗೆ ಹೇಳಿ ಹೊಡೆಸ್ತಿದ್ದರು. ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಕ್ಕೆ ನಮ್ಮಪ್ಪನೇ ಕಾರಣ ಎಂದು ಮಗ ಮಧುಸಾಗರ್ ದೂರಿದ್ದಾನೆ. ನನ್ನ ಎರಡನೇ ಸಹೋದರಿಗೂ ನನ್ನ ತಂದೆ ತೊಂದರೆ ಕೊಟ್ಟಿದ್ದರು. ನನ್ನ ತಾಯಿಗೆ ಹಾನಿ ಉಂಟು ಮಾಡಲು ಯತ್ನಿಸಿದ್ದರು. ನಮ್ಮನಿಗೆ ನಮ್ಮಪ್ಪ ಚಪ್ಪಲಿಯಿಂದ ಹೊಡೆಯುತ್ತಿದ್ದರು. ನಮ್ಮಮ್ಮನ ಬಾಯಲ್ಲಿ ಚಪ್ಪಲಿ ಇಟ್ಟು ಅವಮಾನಿಸ್ತಿದ್ದರು. ಎಂದೆಲ್ಲಾ ಡೆತ್ ನೋಟ್ ಬರೆದಿದ್ದು, ಈ ಡೆತ್ ನೋಟ್ ಶಂಕರ್ ಜೀವನಕ್ಕೆ ಸಂಕಟವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.










