ಬಲವಂತವಾಗಿ ಬಂದ್ ಮಾಡಿಸಿದರೆ ಕಾನೂನು ರೀತಿ ಕ್ರಮ : ಪೊಲೀಸ್ ಆಯುಕ್ತ ಕಮಲ್ ಪಂತ್.

70
firstsuddi

ಬೆಂಗಳೂರು : ಡಿಸೆಂಬರ್ 31 ರಂದು ಬಂದ್ ನಡೆಸುವ ಬಗ್ಗೆ ಯಾವುದೇ ಮನವಿ ಪತ್ರ ನೀಡಿಲ್ಲ. ಸ್ವಇಚ್ಛೆಯಿಂದ ಬಂದ್ ಆಚರಿಸಿದರೆ ಯಾವುದೇ ಅಡ್ಡಿ ಇಲ್ಲ. ಒತ್ತಾಯಪೂರ್ವಕವಾಗಿ ಯಾವುದೇ ಬಂದ್ ನಡೆಸುವಂತಿಲ್ಲ. ಬಲವಂತವಾಗಿ ಬಂದ್ ಮಾಡಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಹೊಸವರ್ಷಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರದ ಗೈಡ್‍ಲೈನ್ಸ್ ನಂತೆ ಹೊಸ ವರ್ಷ ಆಚರಿಸಬೇಕು. ಹೋಟೆಲ್, ಪಬ್ ಎಲ್ಲಿಯೂ ವಿಶೇಷ ಕಾರ್ಯಕ್ರಮ ಇರಲ್ಲ. ಬುಕ್ಕಿಂಗ್ ಇದ್ದವರು ಮಾತ್ರ ಸೆಲೆಬ್ರೇಷನ್ ಗೆ ತೆರಳಬೇಕು. ನ್ಯೂ ಇಯರ್ ಸೆಲೆಬ್ರೇಷನ್‌ಗೆ ನಿಯಮ ಪಾಲನೆ ಕಡ್ಡಾಯ ಇರಲಿದೆ. ಡಿಸೆಂಬರ್ 31ರಂದು ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಓಪನ್ ಇರುತ್ತೆ. ಆದ್ರೆ ಸಾರ್ವಜನಿಕವಾಗಿ ಹೊಸವರ್ಷಾಚರಣೆ ಮಾಡುವಂತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.