ಸಿಎಂ ನಿವಾಸದ ಎದುರು ವೃದ್ಧನ ಹೈಡ್ರಾಮಾ – ಪೊಲೀಸರಿಂದ ಅನ್ಯಾಯವಾಗಿದೆ ಎಂದು ಆತ್ಮಹತ್ಯೆಗೆ ಯತ್ನ…

80
firstsuddi

ಬೆಂಗಳೂರು : ಪೊಲೀಸರಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಿಎಂ ಬೊಮ್ಮಾಯಿ ಅವರ ಎದುರೇ ವೃದ್ಧರೊಬ್ಬರು ವಿಷ ಕುಡಿಯಲು ಯತ್ನಿಸಿದ ಘಟನೆ ಇಂದು ನಡೆದಿದೆ. ಆರ್ ಟಿ ನಗರದಲ್ಲಿರುವ ಸಿಎಂ ನಿವಾಸದ ಎದುರು ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಆಗಮಿಸಿದ ಸುಂಕದಕಟ್ಟೆ ನಿವಾಸಿ ಚಂದ್ರಶೇಖರ್ ಎಂಬುವವರು ನನಗೆ ಪೊಲೀಸರಿಂದ ಅನ್ಯಾಯವಾಗಿದೆ ಎಂದು ಸಿಎಂ ಮುಂದೆ ಅಲಳು ತೋಡಿಕೊಂಡದ್ದಾರೆ.

ಪೊಲೀಸರು ಕೆಲವರ ಜೊತೆ ಸೇರಿ ಸೈಟ್ ಮಾರಾಟದಲ್ಲಿ ಲಕ್ಷಾಂತರ ರೂ. ಮೋಸ ಮಾಡಿದ್ದಾರೆ ಎಂದು ಅನ್ನೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿದ ವೃದ್ಧ, ನ್ಯಾಯ ಕೊಡಿಸುವಂತೆ ಎಂದು ಸಿಎಂ ಬಳಿ ಮನವಿ ಮಾಡಿದರು. ಅಲ್ಲದೇ ಈಗಾಗಲೇ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎನ್ನುತ್ತಲೇ ಬಾಟ್ಲಿ ತೆಗೆದು ಸಿಎಂಗೆ ತೋರಿಸಿ ವೃದ್ಧ ಕುಡಿಯಲು ಯತ್ನಿಸಿದರು. ಈ ವೇಳೆ ಪೊಲೀಸರು ವೃದ್ಧನನ್ನು ತಡೆದಿದ್ದಾರೆ. ನಂತರ ವೃದ್ಧನನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ವಿಚಾರಣೆ ನಡೆಸಿ ಮಾಹಿತಿ ಪಡೆದರು. ಆಗ ಸಿಎಂ ಈ ಕುರಿತಂತೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.