ರಾಯಚೂರು : ಕಲುಷಿತ ನೀರಿಗೆ ಐದನೇ ಬಲಿ…

65
firstsuddi

ರಾಯಚೂರು : ಇಲ್ಲಿನ ನಗರಸಭೆಯ ನಿರ್ಲಕ್ಷ್ಯದಿಂದಾಗಿ ಕಲುಷಿತ ನೀರು ಸೇವಿಸಿ ಮತ್ತೋರ್ವ ಸಾವನ್ನಪ್ಪಿದ್ದು, ಇದುವರಗೆ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಗರದ ವಾರ್ಡ್ ಸಂಖ್ಯೆ 13ರ ಯರಗೆರಾ ಕಾಲೋನಿ ನಿವಾಸಿ ಜನಕರಾಜ್ (48) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಈಗಾಗಲೇ ನಗರದ ಮಲ್ಲಮ್ಮ, ಅಬ್ದುಲ್ ಗಫಾರ್, ಮೊಹಮ್ಮದ್ ನೂರ್ ಮತ್ತು ಅಬ್ದುಲ್ ಕರೀಂ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ್ದಾರೆ. ನೂರಾರು ಜನ ಹಾಗೂ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟಿನಲ್ಲಿ ನಗರಸಭೆ ಇನ್ನೆಷ್ಟು ಬಲಿ ಪಡೆಯುತ್ತದೆಯೋ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.