ಬೆಂಗಳೂರು : ಬೆಳ್ಳಂಬೆಳಗ್ಗೆಯೇ ರಾಜ್ಯದ 21 ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್ ನೀಡಿದೆ. ರಾಜ್ಯಾದ್ಯಂತ 80 ಕಡೆಗಳಲ್ಲಿ 300 ಅಧಿಕಾರಿಗಳ ತಂಡ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲೇ 10 ಕಡೆ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ, ಆಸ್ತಿ ಸಂಪಾದನೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ರಾಜ್ಯಾದ್ಯಂತ ಎಸಿಬಿ ದಾಳಿ ನಡೆದಿರುವ ಅಧಿಕಾರಿಗಳ ಪಟ್ಟಿ ಹೀಗಿದೆ:
1. ಸಿದ್ದಪ್ಪ ಟಿ. , ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು
2. ತಿಪ್ಪಣ್ಣ ಪಿ ಸಿರಸಗಿ, ಜಿಲ್ಲಾ ಕಾರ್ಯಕ್ರಮಾಧಿಕಾರಿ, ಬೀದರ್
3. ಭೀಮ್ ರಾವ್ ವೈ ಪವಾರ್, ಸೂಪರ್ಡೆಂಟ್ ಆಫ್ ಇಂಜಿನಿಯರ್, ಬೆಳಗಾವಿ.
4. ಹರಿಶ್, ಅಸಿಸ್ಟಂಟ್ ಇಂಜಿನಿಯರ್ ಸಣ್ಣ ನೀರಾವರಿ,ಉಡುಪಿ
5. ರಾಮಕೃಷ್ಣ ಎಚ್ ವಿ ಎಇಇ ಸಣ್ಣ ನೀರಾವರಿ ಹಾಸನ
6. ಉದಯ ರವಿ, ಪೊಲೀಸ್ ಇನ್ಸ್ಪೆಕ್ಟರ್, ಕೊಪ್ಪಳ
7. ಬಿ. ಜಿ.ತಿಮ್ಮಯ್ಯ, ಕೇಸ್ ವರ್ಕರ್, ಕಡೂರು ಪುರಸಭೆ
8. ಚಂದ್ರಪ್ಪ ಸಿ ಹೋಳೇಕರ್, ಯುಪಿಟಿ ಕಚೇರಿ, ರಾಣೆಬೆನ್ನೂರು
9. ಜನಾರ್ದನ್ ,ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ), ಬೆಂಗಳೂರು
10. ರಾಜೀವ್ ಪುರಸಯ್ಯ ನಾಯಕ್ ,ಸಹಾಯಕ ಇಂಜಿನಿಯರ್, ಪಿಡಬ್ಲ್ಯುಡಿ ಇಲಾಖೆ, ಕಾರವಾರ
11. ಬಿ ಆರ್ ಬೋಪಯ್ಯ, ಜೂನಿಯರ್ ಇಂಜಿನಿಯರ್, ಪೊನ್ನಂಪೇಟೆ ಜಿಲ್ಲಾ ಪಂಚಾಯತ್
12. ಮಧುಸೂಧನ್, ಜಿಲ್ಲಾ ನೋಂದಣಾಧಿಕಾರಿ, ಐಜಿಆರ್ ಕಚೇರಿ, ಬೆಳಗಾವಿ
13. ಪರಮೇಶ್ವರಪ್ಪ, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ, ಹೂವಿನಹಡಗಲಿ
14. ಮೃತುಂಜಯ ಚೆನ್ನಬಸಯ್ಯ ತಿರಾಣಿ, ಸಹಾಯಕ ಕಂಟ್ರೋಲರ್, ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್
15. ಮೋಹನ್ ಕುಮಾರ್, ಕಾರ್ಯನಿರ್ವಾಹಕ ಇಂಜಿನಿಯರ್, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ
16. ಶ್ರೀಧರ್, ಜಿಲ್ಲಾ ನೋಂದಣಾಧಿಕಾರಿ, ಕಾರವಾರ
17. ಮಂಜುನಾಥ್ ಜಿ ,ನಿವೃತ್ತ ಇಇ. ಪಿಡಬ್ಲ್ಯುಡಿ
18. ಶಿವಲಿಂಗಯ್ಯ, ಸಿ ಗ್ರೂಪ್, ಬಿಡಿಎ
19. ಯಲ್ಲಪ್ಪ ಎನ್ ಪಡಸಾಲಿ, ಆರ್ ಟಿಒ, ಬಾಗಲಕೋಟೆ
20. ಶಂಕರಪ್ಪ ನಾಗಪ್ಪ ಗೋಗಿ, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬಾಗಲಕೋಟೆ
21. ಪ್ರದೀಪ್ ಎಸ್ ಆಲೂರ್, ಪಂಚಾಯತ್ ಗ್ರೇಡ್-2 ಕಾರ್ಯದರ್ಶಿ, ಆರ್ ಡಿಪಿಆರ್ ಗದಗ










