ನಿತ್ಯಾನಂದ ಸ್ವಾಮಿಯನ್ನು ಮದುವೆ ಆಗ್ತೀನಿ ಎಂದ ‘ಜೇಮ್ಸ್’ ನಟಿ ಪ್ರಿಯಾ ಆನಂದ್.

76
firstsuddi

ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಮತ್ತು ಬಹುಭಾಷಾ ತಾರೆ ಪ್ರಿಯಾ ಆನಂದ್ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಮದುವೆಯ ಬಗ್ಗೆ ಹೇಳಿಕೆಯೊಂದನ್ನು ನೀಡಿ ಇದೀಗ ಸುದ್ದಿಯಾಗಿದ್ದಾರೆ.

ತಮ್ಮ ಮದುವೆ ಕುರಿತಂತೆ ಮಾತನಾಡಿರುವ ಪ್ರಿಯಾ, ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ್ದಾರೆ. ನಟಿಯ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.

ನಿತ್ಯಾನಂದ ಮೇಲೆ ಈಗಾಗಲೇ ಭಾರತದಲ್ಲಿ ಹಲವು ಕೇಸುಗಳಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ಭಾರತವನ್ನು ತೊರೆದು ಈಕ್ವೆಡಾರ್ ಬಳಿ ಒಂದು ಸಣ್ಣ ದ್ವೀಪವನ್ನು ಖರೀದಿಸಿ ಅದಕ್ಕೆ ‘ಕೈಲಾಸ’ ಎಂದು ಹೆಸರಿಸಿ ಅಲ್ಲಿ ವಾಸಿಸುತ್ತಿದ್ದಾರೆ. ಸದ್ಯ ನಿತ್ಯಾನಂದ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಸತ್ತಿದ್ದಾರೆ ಎಂಬ ವದಂತಿಯಿರುವ ಸಮಯದಲ್ಲಿ ಈ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಖ್ಯಾತ ನಟಿ ಪ್ರಿಯಾ ಅವರ ಈ ಹೇಳಿಕೆಗಳು ಅಭಿಮಾನಗಳಲ್ಲಿ ಅಚ್ಚರಿ ಮೂಡಿಸಿದ್ದು, ನಿತ್ಯಾನಂದ ಅವರಿಗೆ ಈ ವಿಷಯವನ್ನು ತಲುಪಿಸುವುದು ಹೇಗೆ ಎಂಬ ಚರ್ಚೆ ಕೂಡ ನಡೆದಿದೆ.