ಚಿಕ್ಕಮಗಳೂರು : ಮಾಜಿ ಎಂಎಲ್ ಸಿ, ಚಿಕ್ಕಮಗಳೂರಿನ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಮನೆ ಮೇಲೆ ಸತತ ಎರಡನೇ ದಿನವೂ ಐಟಿ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದೆ.
ನಿನ್ನೆಯಿಂದ ದಾಳಿ ನಡೆಯುತ್ತಿದ್ದರು ಕೂಡ ಗಾಯತ್ರಿ ಶಾಂತೇಗೌಡ ಬೆಂಗಳೂರಿನಲ್ಲಿ ಇದ್ದು, ಈವರೆಗೂ ಮನೆಗೆ ಬಂದಿಲ್ಲ. ನಿನ್ನೆ ಗಾಯತ್ರಿ ಅವರ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆ ಗಾಯತ್ರಿ ನಿವಾಸದ ಮುಂದಿನ ರಸ್ತೆಯ ಎರಡೂ ಸೈಡ್ ಪೊಲೀಸರು ಕಂಪ್ಲೀಟ್ ಕ್ಲೋಸ್ ಮಾಡಿದ್ದಾರೆ.
ಈ ದಾಳಿಯನ್ನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಭ್ರಷ್ಟಾಚಾರ ವಿರೋಧಿಸಿ ಕಡೂರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ 10ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.










