ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ – ಗಂಡನ ಮನೆಯವರೇ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪ…

81
firstsuddi

ಬೆಂಗಳೂರು: ನಗರದ ಸುದ್ದಗುಂಟೆಪಾಳ್ಯದ ಪೊಲೀಸ್ ಠಾಣಾ ವ್ಯಾಪ್ತಿಯ ಗುರಪ್ಪನಪಾಳ್ಯದ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.

ಮಹಿಳೆಯನ್ನು ಕತೀಜಾ ಕೂಬ್ರ (29) ಎಂದು ಗುರುತಿಸಲಾಗಿದೆ. ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕತೀಜಾ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

ಮಹೆಬೂಬ್ ಪರೀಷ್ ಪತ್ನಿಯನ್ನ ಹೊಡದು ನೇಣು ಹಾಕಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ದೂರು ಆಧರಿಸಿ ಪತಿ ಮೆಹಬೂಬ್ ಪರೀಷ್, ಮಾವ, ನಾದಿನಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಸಂಬಂಧ ಮಾತನಾಡಿದ ಮೃತ ಕತೀಜಾ ತಂದೆ ಜಾವಿದ್ ವುಲ್ಲಾಖಾನ್, ಮದುವೆಯಾದಾಗಿನಿಂದ ಮಗಳ ಜೊತೆ ಯಾವಾಗಲೂ ಜಗಳ ಆಗುತ್ತಿತ್ತು. ನನ್ನ ಅಳಿಯನಿಗೆ ಇನ್ನೋರ್ವ ಮಹಿಳೆಯ ಜೊತೆ ಸಂಬಂಧವಿದೆ. ಹಾಗಾಗಿ ನನ್ನ ಮಗಳನ್ನ ಅಳಿಯನೇ ಸಾಯಿಸಿದ್ದಾನೆ. ನನ್ನ ಮಗಳ ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಅವರಿಗೆ ಶಿಕ್ಷೆಯಾಗಬೇಕು ಎಂದು ಕಣ್ಣೀರು ಹಾಕಿದ್ದಾರೆ.