ಮೆಟ್ರೋ ಪಿಲ್ಲರ್ ದುರಂತ – ಎಂಟು ಮಂದಿ ವಿರುದ್ಧ ಎಫ್‍ಐಆರ್ : ಆರಗ ಜ್ಞಾನೇಂದ್ರ

68
firstsuddi

ಬೆಂಗಳೂರು : ನಗರದಲ್ಲಿ ನಿನ್ನೆ ನಡೆದ ಮೆಟ್ರೋ ಪಿಲ್ಲರ್ ದುರಂತಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ನಿನ್ನೆ ಎಫ್ ಐಆರ್ ಆಗಿತ್ತು. ಆದರೆ ಹೆಸರುಗಳನ್ನ ಉಲ್ಲೇಖಿಸಿ ಎಫ್ ಐಆರ್ ರಿಜಿಸ್ಟರ್ ಆಗಿರಲಿಲ್ಲ. ಆದ್ರೀಗ ಎಫ್‍ಐಆರ್ ನಲ್ಲಿ ಹೆಸರು ಉಲ್ಲೇಖ ಆಗಿದೆ, 8 ಮಂದಿ ಹೆಸರನ್ನ ಸೇರಿಸಿ ಎಫ್ಐಆರ್ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದರು.

ನಾಗಾರ್ಜುನ ಕನ್ಸ್ ಟ್ರಕ್ಷನ್ ಕಂಪನಿಯ ಜೆಐ ಪ್ರಭಾಕರ್, ಚೈತನ್ಯ, ಮಥಾಯಿ, ವಿಕಾಸ್ ಸಿಂಗ್, ಸೂಪರ್ ವೈಸರ್ ಲಕ್ಷ್ಮೀಪತಿ, ಬಿಎಂಆರ್ ಸಿಎಲ್ ಇಂಜಿನಿಯರ್ ವೆಂಕಟೇಶ್ ಶೆಟ್ಟಿ, ಮಹೇಶ್ ಬೆಂಡೆಕೇರಿ ಇವರ ಮೇಲೆ ಎಫ್ಐಆರ್ ಆಗಿದೆ. ಇವರ ಮೇಲೆ ಕ್ರಮ ಆಗಲಿದೆ ಎಂದರು.

ಈಗಾಗಲೇ ಸ್ಯಾಂಟ್ರೋ ರವಿ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕಲಾಗಿದೆ. ಅವನ ಓಡಾಟ ಎಲ್ಲೆಲ್ಲಿ ಇತ್ತೋ ಅಲ್ಲೆಲ್ಲ ಕಡೆ ಪೊಲೀಸ್ ನವರು ಸರ್ಚ್ ಮಾಡಿದ್ದಾರೆ. ಸ್ಯಾಂಟ್ರೋ ರವಿ ಬಂಧನಕ್ಕೆ ಎಲ್ಲ ರೀತಿ ಟೀಮ್ ಮಾಡಿ ಮೈಸೂರು ಪೊಲೀಸರು ಸರ್ಚ್ ಮಾಡುತ್ತಿದ್ದಾರೆ. ಉಳಿದುಕೊಂಡಿದ್ದ ಲಾಡ್ಜ್ ಎಲ್ಲ ಚೆಕ್ ಮಾಡುತ್ತಿದ್ದಾರೆ. ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ, ಹಾಗಾಗಿ ಹುಡುಕೋದು ಕಷ್ಟವಾಗಿದೆ. ಸ್ಯಾಂಟ್ರೋ ರವಿಯ ಬಂಧನ ಆಗಿಯೇ ಆಗುತ್ತೆ, ಆತ ಎಲ್ಲೇ ಇದ್ರೂ ಪೊಲೀಸರು ಎಳೆದುಕೊಂಡು ಬರ್ತಾರೆ ಎಂದು ಮಾಹಿತಿ ನೀಡಿದರು.