ಧ್ರುವ ಸರ್ಜಾಗೆ ಬರ್ತ್​ಡೇ ಸಂಭ್ರಮ: ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟ…

58
firstsuddi

ಚಿರಂಜೀವಿ ಸರ್ಜಾ ನಿಧನ ಸೇರಿದಂತೆ ನಾನಾ ಕಾರಣಗಳಿಂದಾಗಿ ಕಳೆದ ಮೂರು ವರ್ಷಗಳಿಂದ ಧ್ರುವ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಹೀಗಾಗಿ ಮೂರು ವರ್ಷಗಳ ನಂತರ ತಮ್ಮ ನೆಚ್ಚಿನ ನಟ ತಮ್ಮೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಅಭಿಮಾನಿಗಳ ದೊಡ್ಡ ಸಂಭ್ರಮಕ್ಕೆ ಕಾರಣವಾಗಿದೆ.

ಬೆಂಗಳೂರಿನ ಬಸವನಗುಡಿಯ ತಮ್ಮ ನಿವಾಸದಲ್ಲಿ ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಅವರ ನಿವಾಸಕ್ಕೆ ಆಗಮಿಸಿದ್ದರು.

ಈ ಬಾರಿ ಧ್ರುವ ಸರ್ಜಾ ಹುಟ್ಟುಹಬ್ಬದ ವಿಶೇಷತೆ ಎಂದರೆ ಚಿರಂಜೀವಿ ಸರ್ಜಾ ನಟನೆಯ ಸಿನಿಮಾ ‘ರಾಜ ಮಾರ್ತಾಂಡ’ ಚಿತ್ರ ತೆರೆ ಕಾಣುತ್ತಿರುವುದು. ರಾಮ್‌ನಾರಾಯಣ್‌ ನಿರ್ದೇಶನ, ಶಿವಕುಮಾರ್ ನಿರ್ಮಾಣದ ‘ರಾಜಮಾರ್ತಾಂಡ’ ಸಿನಿಮಾ ಇಂದು (ಅ.6) ತೆರೆ ಮೇಲೆ ಮೂಡುತ್ತಿದೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿರುವುದು ವಿಶೇಷ.

ಈ ಹುಟ್ಟು ಹಬ್ಬಕ್ಕೆ ಚಿರಂಜೀವಿ ಸರ್ಜಾ ಅವರ ಸಿನಿಮಾ ರಿಲೀಸ್ ಆಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಗಣೇಶನ ಹಬ್ಬದಂದು ಮನೆಗೆ ಧ್ರುವ ಅವರ ಪುತ್ರ ಬಂದಿದ್ದಾರೆ. ಹೀಗಾಗಿ ಡಬಲ್ ಉಡುಗೊರೆಯನ್ನೇ ಧ್ರುವ ಸರ್ಜಾ ಪಡೆದಿದ್ದಾರೆ. ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಂತರ ಥಿಯೇಟರ್ ಗೆ ಬಂದು ಅಣ್ಣನ ಸಿನಿಮಾವನ್ನು ವೀಕ್ಷಿಸಲಿದ್ದಾರೆ ಧ್ರುವ.

ಈ ಹುಟ್ಟು ಹಬ್ಬಕ್ಕೆ ಚಿರಂಜೀವಿ ಸರ್ಜಾ ಅವರ ಸಿನಿಮಾ ರಿಲೀಸ್ ಆಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಗಣೇಶನ ಹಬ್ಬದಂದು ಮನೆಗೆ ಧ್ರುವ ಅವರ ಪುತ್ರ ಬಂದಿದ್ದಾರೆ. ಹೀಗಾಗಿ ಡಬಲ್ ಉಡುಗೊರೆಯನ್ನೇ ಧ್ರುವ ಸರ್ಜಾ ಪಡೆದಿದ್ದಾರೆ. ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಂತರ ಥಿಯೇಟರ್ ಗೆ ಬಂದು ಅಣ್ಣನ ಸಿನಿಮಾವನ್ನು ವೀಕ್ಷಿಸಲಿದ್ದಾರೆ.