ಬೆಂಗಳೂರು : ಹೊಸದಾಗಿ ಸಂಪುಟ ಸೇರ್ಪಡೆಗೊಂಡ 10 ಮಂದಿ ನೂತನ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದು, ಸಚಿವ ರಮೇಶ್ ಜಾರಕಿಹೊಳಿ ಅವರು ಜಲ ಸಂಪನ್ಮೂಲ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರಿಗೆ ಯಾವ ಖಾತೆ?
- ರಮೇಶ್ ಜಾರಕಿಹೊಳಿ-ಜಲ ಸಂಪನ್ಮೂಲ ಖಾತೆ.
- ಆನಂದ್ ಸಿಂಗ್-ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ.
- ಕೆ. ಸುಧಾಕರ್-ವೈದ್ಯಕೀಯ ಶಿಕ್ಷಣ ಖಾತೆ.
- ಬಿ.ಸಿ. ಪಾಟೀಲ್-ಅರಣ್ಯ ಖಾತೆ.
- ಗೋಪಾಲಯ್ಯ-ಸಣ್ಣ ಕೈಗಾರಿಕೆ ಖಾತೆ.
- ಶಿವರಾಂ ಹೆಬ್ಬಾರ್-ಕಾರ್ಮಿಕ ಖಾತೆ.
- ಶ್ರೀಮಂತ ಪಾಟೀಲ್-ಜವಳಿ ಖಾತೆ.
- ಎಸ್.ಟಿ. ಸೋಮಶೇಖರ್-ಸಹಕಾರ ಖಾತೆ.
- ನಾರಾಯಣ ಗೌಡ-ಪೌರಾಡಳಿತ ಖಾತೆ.
- ಬೈರತಿ ಬಸವರಾಜ್-ನಗರಾಭಿವೃದ್ಧಿ ಖಾತೆ.










