ನವದೆಹಲಿ: ಅಯೋದ್ಯೆಯ ರಾಮ ಜನ್ಮ ಭೂಮಿ ಭೂ ವಿವಾದ ಪ್ರಕರಣ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಜನವರಿ 29 ಕ್ಕೆ ಮುಂದೂಡಿದೆ. ಇಂದು ಅಯೋಧ್ಯೆ ವಿಚಾರಣೆ ನಡೆಸಬೇಕಿತ್ತು. ಆದರೆ ನ್ಯಾ.ಯು ಯು ಲಲಿತ್ ಅವರು ಪೀಠದಿಂದ ಹಿಂದೆ ಸರಿದಿದ್ದರಿಂದ ವಿಚಾರಣೆಗೆ ಹೊಸ ಪೀಠ ರಚನೆಯಾಗಬೇಕಿದೆ ಎಂದು ಸಿಜೆಐ ರಂಜನ್ ಗೊಗೊಯ್ ತಿಳಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಡಿ.ವೈ. ಚಂದ್ರಚೂಡ್, ಎಸ್. ಎ. ಬೊಬ್ಡೆ, ಎನ್.ವಿ.ರಮಣ, ಈ ಪೀಠದ ನೇತೃತ್ವ ವಹಿಸಿದ್ದರು.ಪ್ರಕರಣ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿದೆ.










