ಚಿಕ್ಕಮಗಳೂರು : ಕೊರೊನಾ ಭೀತಿ–ಜಿಲ್ಲೆಯನ್ನೂ ಲಾಕ್‍ಡೌನ್ ಮಾಡಲು ಐಎಂಎ ವೈದ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

364
firstsuddi

ಚಿಕ್ಕಮಗಳೂರು : ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆ, ಜಿಲ್ಲೆಯನ್ನೂ ಈ ಕೂಡಲೇ  ಲಾಕ್‍ಡೌನ್ ಮಾಡಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಂಘದ ವೈದ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೊರೊನಾ ವೈರಸ್ ಕರ್ನಾಟಕದಲ್ಲೂ ಹರಡಿ ರಾಜ್ಯದ ಜನತೆಯನ್ನು ಭಯಭೀತರನ್ನಾಗಿಸಿದ್ದು, ಹೀಗಾಗಿ ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯನ್ನು ಸೇರಿಸಿದರೆ ಇರುವುದು ಕೇವಲ 10 ವೆಂಟಿಲೇಟರ್. ಶೇ. 10ರಷ್ಟು ಜನಕ್ಕೆ ಸೋಂಕು ತಗುಲಿದರೂ 15 ಸಾವಿರ ಜನ ಆಗುತ್ತಾರೆ. ಅವರಲ್ಲಿ ಶೇ.1ರಷ್ಟು ಜನಕ್ಕೆ ಉಸಿರಾಟದ ತೊಂದರೆ ಆದರೂ 150 ಜನ ಆಗುತ್ತಾರೆ. ನಮ್ಮಲ್ಲಿ ಇರುವುದು ಕೇವಲ 10 ವೆಂಟಿಲೇಟರ್. ಬಂದವರನ್ನು ಹಾಸನ, ಮಂಗಳೂರಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಜನರು ಹೇಗೆ ಬೇಕು ಹಾಗೇ ಓಡಾಡಿಕೊಂಡು ಇದ್ದಾರೆ. ಪರಿಸ್ಥಿತಿ ಕೈ ಮೀರಿದರೆ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜಿಲ್ಲೆಯನ್ನು ಕೂಡಲೇ ಲಾಕ್‍ಡೌನ್ ಮಾಡುವುದು ಒಳ್ಳೆಯದು ಎಂದು ಜಿಲ್ಲಾಧಿಕಾರಿ ಡಾ. ಬಗಾಧಿ ಗೌತಮ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.