ಶಾಲಾ ಮಕ್ಕಳು ಹಾಗೂ ಪೋಷಕರ ಮೇಲೆ ನಾಯಿ ದಾಳಿ…

392
firstsuddi

ಬೆಂಗಳೂರು: ರಾಜಾಜಿನಗರದ 6ನೇ ಬ್ಲಾಕ್ ನ ಗುಬ್ಬಣ್ಣ ಲೇಔಟ್ ನಲ್ಲಿ ಬೀದಿನಾಯಿಗಳು ಶಾಲಾ ಮಕ್ಕಳು, ಪೋಷಕರ ಮೇಲೆ ದಾಳಿ ನಡೆಸಿದ್ದು, ಖಾಸಗಿ ಶಾಲಾ ಮಕ್ಕಳಾದ ಆಕಾಶ್, ಸಾಯಿಸಿರಿ ಸೇರಿದಂತೆ, ಮಕ್ಕಳನ್ನು ಶಾಲೆಗೆ ಬಿಡಲು ತೆರಳಿದ್ದ ಪೋಷಕರ ಮೇಲೂ ನಾಯಿಗಳು ದಾಳಿ ನಡೆಸಿವೆ. ಗಾಯಾಳು ವಿದ್ಯಾರ್ಥಿಗಳು, ಪೋಷಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಬಳಿಕ ಬಿಬಿಎಂಪಿ ಶ್ವಾನಗಳನ್ನು ಹಿಡಿಯಲು ಕಾರ್ಯಾಚರಣೆಯನ್ನು ನಡೆಸುತ್ತಿದೆ.