ಮೂಡಿಗೆರೆ ಸರ್ಕಲ್ ಇನ್‍ಸ್ಪೆಕ್ಟರ್ ಬೀಳ್ಕೊಡುಗೆ ಸಮಾರಂಭದಲ್ಲಿ ಮಿಸ್ ಯು ಸರ್ ಅಂತ ಕಣ್ಣೀರಿಟ್ಟ ಶ್ವಾನ…

2628

ಮೂಡಿಗೆರೆ: ಸರ್ಕಲ್ ಇನ್‍ಸ್ಟೆಕ್ಟರ್ ರಾದ ಜಗದೀಶ್‍ರವರು ಮೂಡಿಗೆರೆಯಲ್ಲಿ ಸುಮಾರು ಮೂರು ವರ್ಷ ಎಂಟು ತಿಂಗಳ ಕಾಲ ಸೇವೆ ಸಲ್ಲಿಸಿ ಇದೀಗ ಚುನಾವಣಾ ಸಂದರ್ಭದಲ್ಲಿ ಬೆಂಗಳೂರಿನ ಇಂಟಲಿಜೆನ್ಸ್ ಬ್ಯೂರೋಗೆ ವರ್ಗಾವಣೆಯಾದ ವೃತ್ತ ನಿರೀಕ್ಷಕರಿಗೆ ಬಣಕಲ್ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗೂ ಚಿಕ್ಕಮಗಳೂರು ಕಾರ್ಯನಿರತ ಪತ್ರಕರ್ತರ ಸಂಘ ಮೂಡಿಗೆರೆ ಇವರಿಂದ ಸನ್ಮಾನವನ್ನು ಏರ್ಪಡಿಸಲಾಗಿತ್ತು.
ವೃತ್ತ ನಿರೀಕ್ಷಕರಿಗೆ ಇಲ್ಲಿನ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಪ್ರೀತಿಯ ಒಡನಾಟವನ್ನು ಇಟ್ಟುಕೊಂಡಿದ್ದು, ಅದೇ ರೀತಿ ಇವರಿಗೆ ಪ್ರಾಣಿಗಳು ಎಂದರೆ ವಿಶೇಷವಾದ ಪ್ರೀತಿ, ಒಲವು ಇತ್ತು. ಅದಕ್ಕೆ ಸಾಕ್ಷಿ ಎಂಬಂತೆ ಸನ್ಮಾನವನ್ನು ಸ್ವೀಕರಿಸಿ ಠಾಣೆಯಿಂದ ಹೊರ ಬರುತ್ತಿದ್ದ ಹಾಗೇ ಅವರ ಜೊತೆ ಅತಿ ಒಡನಾಟದಲ್ಲಿದ್ದಂತಹ ಎರಡು ಶ್ವಾನಗಳು ಠಾಣೆಯ ಹೊರಗೆ ಕಾದು ಕುಳಿತಿದ್ದು, ಭಾವನಾತ್ಮಕವಾಗಿ ಕಣ್ಣೀರಿಟ್ಟು ಮಿಸ್ ಯು ಸರ್ ಅಂತ ಶ್ವಾನಗಳು ಹೇಳಿದ್ದು ಅಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರಿಗೆ ಬಾವುಕರಾಗುವಂತೆ ಮಾಡಿತು.