ದಾರದಹಳ್ಳಿ ಗ್ರಾ.ಪಂ.ಗೆ ಹೆಚ್ಚಿನ ಅನುದಾನವನ್ನು ಕೊಡಲು ಮುಖ್ಯಮಂತ್ರಿಗಳಿಂದ ಭರವಸೆ :ರಂಜನ್‍ಅಜಿತ್ ಕುಮಾರ್…

870
firstsuddi

ಮೂಡಿಗೆರೆ: ಮಾದರಿ ಗ್ರಾಮ ಪಂಚಾಯಿತಿಯೆಂಬ ಹಿರಿಮೆಗೆ ಒಳಪಟ್ಟಿರುವ ದಾರದಹಳ್ಳಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳಿಗಾಗಿ ಒತ್ತು ಕೊಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವರಿಕೆ ಮಾಡಿದ ಹಿನ್ನಲೆಯಲ್ಲಿ ಸಂಸದರ ಆದರ್ಶ ಗ್ರಾಮವೆನಿಸಿಕೊಂಡಿರುವ ಇಲ್ಲಿನ ಪಂಚಾಯಿತಿಗೆ ಹೆಚ್ಚಿನ ಅನುದಾನವನ್ನು ಕೊಡಿಸಿಕೊಡಲು ನಾನು ಬದ್ದನಾಗಿದ್ದೇನೆ ಎಂದು ಜೆ.ಡಿ.ಎಸ್.ಜಿಲ್ಲಾಧ್ಯಕ್ಷರು ಹಾಗೂ ತಾ.ಪಂ.ಸದಸ್ಯರಾದಂತಹ ರಂಜನ್ ಅಜಿತ್ಕುಮಾರ್ ತಿಳಿಸಿದರು.
ದಾರದಹಳ್ಳಿಯಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ಅಧಿಕಾರ ಹಸ್ತಾಂತರಿಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿ ನಾನು ಇದೇ ಗ್ರಾಮದವನಾಗಿ ನನ್ನ ಪಂಚಾಯಿತಿಗೆ ಹೆಚ್ಚಿನ ಅನುದಾನವನ್ನು ತಂದು ಕೊಡಬೇಕು ಎಂಬಂತಹ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚಿಸಿ ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಕೊಡಿಸಿಕೊಡಬೇಕು ಎಂದು ಮನವಿ ಮಾಡಿದ ಹಿನ್ನಲೆಯಲ್ಲಿ ಇಲ್ಲಿನ ಪಂಚಾಯಿತಿಗೆ ಮುಖ್ಯಮಂತ್ರಿಗಳು ಇಲ್ಲಿಗೆ ಅನುದಾನವನ್ನು ಕೊಡಿಸಿ ಕೊಡುವ ಭರವಸೆಯನ್ನು ನೀಡಿರುತ್ತಾರೆ.
ರಾಜಕೀಯಕ್ಕೆ ನಾನು ಮೊದಲು ಪ್ರವೇಶಿಸಿ ನನ್ನ ಗ್ರಾಮವನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ದಿಯ ಕಡೆಯತ್ತಾ ಕೊಂಡು ಹೋಗಬೇಕು ಎಂಬಂತಹ ನಿಟ್ಟಿನಲ್ಲಿ ನನ್ನ ಜವಬ್ದಾರಿಯನ್ನು ನಾನು ನಿಭಾಹಿಸುತ್ತಾ ಬಂದಿದ್ದೇನೆ ಈಗಾಗಲೇ ಗ್ರಾಮ ಪಂಚಾಯಿತಿಗೆ ಸಂಬಂದಪಟ್ಟಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಅವಧಿಯಲ್ಲಿ ನಾನು ಇಲ್ಲಿನ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ನೀಡಿದ್ದು ಹಾಗೂ ಈಗ ನಾನು ಮುಖ್ಯಮಂತ್ರಿಗಳಿಗೆ ಹೆಚ್ಚಾಗಿ ಸಂಪರ್ಕದಲ್ಲೇ ಇರುವುದರಿಂದ ಗ್ರಾಮದ ರಸ್ತೆ ಕುಡಿಯುವ ನೀರು ವಸತಿ ಹಾಗೂ ಇನ್ನಿತರ ಮೂಲಭೂತ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಸದಾ ಪ್ರಯತ್ನದಲ್ಲಿದ್ದೇನೆ ಎಂದರು.
ಬಹುದಿನಗಳ ಗ್ರಾಮಸ್ಥರ ಕನಸಾದ ದಾರದಹಳ್ಳಿಗೆ ಸಂಪರ್ಕ ಕಲ್ಪಿಸುವ ಹಂಡುಗುಳಿ ದಾರದಹಳ್ಳಿ ನೂತನ ರಸ್ತೆಗೆ ಆದ್ಯತೆ ನೀಡಿದ ಮೇರೆಗೆ ಇಂದು ಇಲ್ಲಿ ಹೊಸದಾಗಿ ರಸ್ತೆಯನ್ನು ನಿರ್ಮಿಸಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಇದನ್ನು ಆದಷ್ಟು ಬೇಗ ಪೂರ್ತಿಗೊಳಿಸಲು ಹಾಗೂ ಇದರ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡುವುದರ ಜೊತೆಗೆ ಗ್ರಾಮದ ಎಲ್ಲಾ ಕೂಡು ರಸ್ತೆಗಳಿಗೆ ಕಾಯಕಲ್ಪವನ್ನು ಈಗಾಗಲೆ ದೊರಕಿಸಿದ್ದು ತಾಲ್ಲೂಕಿನ ಇತರೇ ಗ್ರಾಮಗಳೂ ಸೇರಿದಂತೆ ಹೊಸದಾಗಿ ಕಳಸ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವುದಕ್ಕಾಗಿ ಹಲವು ಭಾರಿ ಸರ್ವರ ನಿಯೋಗವನ್ನು ಮುಖ್ಯಮಂತ್ರಿಗಳವರೆಗೆ ಕರೆದು ಹೋದ ಪರಿಣಾಮ ಇಂದು ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿ ಬಜೆಟಿನಲ್ಲಿ ಘೋಷಿಸಿದ್ದು ಸ್ವಾಗತಾರ್ಹ ಇನ್ನು ಇಲ್ಲಿ ಅತಿಹೆಚ್ಚು ಅನುದಾನ ಬೇಕಾದಲ್ಲಿ ಸರ್ವಪಕ್ಷ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿಗಳ ಜೊತೆ ಕರೆದುಕೊಂಡು ತಾಲ್ಲೂಕು ಹಾಗೂ ಗ್ರಾಮದ ಎಲ್ಲಾ ಸರ್ವತೋಮಖ ಅಭಿವೃದ್ದಿಗಾಗಿ ಶ್ರಮಿಸಲಾಗುವುದು ಎಂದರು.