ಚಿಕ್ಕಮಗಳೂರು : ಮಂಗಳೂರಿನಲ್ಲಿ ಪ್ರತಿಭಟನೆ ಹಿನ್ನೆಲೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ…

244
firstsuddi

ಚಿಕ್ಕಮಗಳೂರು : ಮಂಗಳೂರಿನಲ್ಲಿ ಗುರುವಾರ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿನ್ನೆ ರಾತ್ರಿಯಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಇಂಟರ್ನೆಟ್ ಸೇವೆ ಸ್ಥಗಿತ ಗೊಳಿಸಿರುವ ಬಗ್ಗೆ ಮೊಬೈಲ್ ಕಂಪನಿ ಮೊಬೈಲ್ ಗ್ರಾಹಕರಿಗೆ ಮೆಸೇಜ್ ರವಾನೆ ಮಾಡಿದ್ದು, ಮಲೆನಾಡಿನ ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದ್ದು, ಮಲೆನಾಡಿಗರು ಇಂಟರ್‍ನೆಟ್ ಸೇವೆಯಿಲ್ಲದೆ ಪರದಾಡುವಂತಾಗಿದೆ.