ಮೂಡಿಗೆರೆ:ಸ್ವಯಂ ಸೇವಕರಿಂದ ಸುಂಡಕೆರೆ ಹಳ್ಳ ಉಳಿಸಿ ಅಭಿಯಾನ…

338
firstsuddi

ಮೂಡಿಗೆರೆ:ಪಟ್ಟಣದ ಜನತೆಗೆ ಕುಡಿಯಲು ನೀರೊದಗಿಸುವ ಹಾಗೂ ಪ್ರಮುಖವಾಗಿ ಪಟ್ಟಣಕ್ಕೆ ನೀರೊದಗಿಸುವ ಪ್ರಥಮ ಸ್ಥಾನದಲ್ಲಿರುವ ನದಿಗಳಲ್ಲೊಂದಾದ ಸುಂಡಕೆರೆ ಹಳ್ಳವು ಇತ್ತೀಚೆಗೆ ಕಸ ಹಾಗೂ ಕಲ್ಮಶದಿಂದ ಕೂಡಿದ್ದು ಇದರ ಶುಚಿತ್ವ ಹಾಗೂ ನದಿನೀರು ಉಳಿಸಿ ಅಭಿಯಾನವನ್ನು ಇಲ್ಲಿನ ಸ್ವಯಂಸೇವಕರು ಸ್ವಯಂಪ್ರೇರಿತವಾಗಿ ಅಭಿಯಾನವನ್ನು ಭಾನುವಾರದಂದು ಕೈಗೆತ್ತಿಕೊಂಡರು.
ಪಟ್ಟಣಕ್ಕೆ ಸಮೀಪವಿರುವ ಬೀಜುವಳ್ಳಿಯಲ್ಲಿ ಹರಿಯುವ ಹಾಗೂ ಇತಿಹಾಸ ಪ್ರೇರಿತವಾಗಿ ಪಟ್ಟಣದ ಜನತೆಗೆ ನೀರೊದಗಿಸುತ್ತಿದ್ದ ಈ ಹಳ್ಳವು ಹಲವು ತಲೆಮಾರಿನಿಂದ ತನ್ನ ಹೆಸರನ್ನು ಉಳಿಸಿಕೊಂಡು ಬಂದಿದ್ದು ಹಾಗೂ ಈ ಹಳ್ಳದಿಂದ ಪ್ರತಿದಿನವೂ ಇಲ್ಲಿಯ ಜನತೆಗೆ ಕುಡಿಯಲು ಶುದ್ದ ನೀರನ್ನು ಒದಗಿಸುವ ಘಟಕವು ಹೊಂದಿದ್ದು ಇತ್ತೀಚೆಗೆ ಈ ಹಳ್ಳವು ಮಾಲಿನ್ಯ ನಾಶಕರಿಂದ ಹದಗೆಟ್ಟು ಹೊಗಿರುತ್ತದೆ ಮತ್ತು ಈ ನೀರು ಇತ್ತೀಚೆಗೆ ನೋಡಲು ಸಹ ಅಸಹ್ಯವಾಗಿತ್ತು ಎನ್ನಲಾಗಿದೆ.

firstsuddi

ಇತ್ತೀಚೆಗೆ ಪಟ್ಟಣದ ಜನತೆಗೆ ಕುಡಿಯುವ ನೀರು ಕೆಲವು ತಾಂತ್ರಿಕ ದೋಷದಿಂದ ಕುಡಿಯಲು ನೀರನ್ನು ಬಳಸದೇ ಇದ್ದಾಗ ಈ ನೀರು ಇನ್ನೂ ವಿನಾಶಕ್ಕೆ ನಾಂದಿಯಾಡುತ್ತಿತ್ತು ಇದನ್ನು ಅರಿತ ಇಲ್ಲಿನ ಸ್ವಯಂ ಸೇವಕರಾದ ಫಿಶ್‍ಮೋಣು, ಅಬ್ದುಲ್ ರೆಹಮಾನ್, ನಟೇಶ್, ಕುಮಾರ್, ಅಸ್ಲಂ, ಚಂದ್ರು, ಅಯ್ವಿನ್ ಪಿಂಟೊ, ಸಂತೋಷ್ ಪಿಂಟೊ, ರಫೀಕ್, ಪಾಪಕ್ಕ, ಪಾಝಿಲ್, ಲಕ್ಷ್ಮಣ್, ಹಾಗು ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಹಾಗು ಇನ್ನಿತರರ ತಂಡಗಳು ಸೇರಿ ನದಿ ಉಳಿಸಿ ಅಭಿಯಾನದೊಂದಿಗೆ ನದಿಯ ದಡದಲ್ಲಿರುವಂತಹ ಪ್ಲಾಸ್ಟಿಕ್, ಕೊಳೆತ ತ್ಯಾಜ್ಯಗಳು ಹಾಗೂ ಹುಲ್ಲನ್ನು ಕೊಚ್ಚಿ ನದಿಯಲ್ಲಿರುವ ವಿಷಕಾರಿ ಅಂಶಗಳನ್ನು ತೊಲಗಿಸುವುದೊಂದಿಗೆ ನೀರಿನ ಮೂಲವನ್ನು ಹಾಗೂ ಪರಿಸರವನ್ನು ನಾವೆಲ್ಲರು ಸ್ವಯಂಪ್ರೇರಿತವಾಗಿ ಕಾಪಾಡಬೇಕಿದೆ ಎಂದು ಅಭಿಯಾನ ಮಾಡುವ ಮುಖಾಂತರ ಇಲ್ಲಿಯ ಜನತೆಗೆ ಕರೆಯನ್ನು ಕೊಟ್ಟರು.