ಮೂಡಿಗೆರೆ :ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಕಳೆದ ರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿ ಪ್ರತೀಕಾರ ತೀರಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಜನ್ನಾಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜನ್ನಾಪುರ ರಘು ಅವರು ಮಾತನಾಡಿ ಇಡೀ ದೇಶ ಯುದ್ಧದ ಕಾರ್ಮೋಡಲ್ಲಿದೆ. ಭಾರತೀಯರು ಎಲ್ಲರು ಒಟ್ಟಾಗಿರಬೇಕು.ನಮ್ಮ ದೇಶದ 133 ಕೋಟಿ ಜನರ ಬೆಂಬಲ ಸೈನಿಕರಿಗೆ ಕೊಡಬೇಕಿದೆ ಎಂದರು. ಈ ಸಂದರ್ಭದಲ್ಲಿ ನವಕರ್ನಾಟಕ ಯುವ ಶಕ್ತಿ ಅಧ್ಯಕ್ಷರಾದ ಹಂತುರು ಸತೀಶ್, ಗ್ರಾಮಪಂಚಾಯಿತಿ ಸದಸ್ಯರಾದ ಸುಧೀರ್, ಸೇರಿದಂತೆ ಇತರರು ಇದ್ದರು









