ಕೊಪ್ಪಳ: ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿ ಒಬ್ಬೊಬ್ಬ ಶಾಸಕನಿಗೆ 50 ಕೋಟಿ ರೂ. ಆಫರ್ ಮುಂದಿಡುತ್ತಿದ್ದಾರೆ. 50 ಕೋಟಿ ರೂ 20 ಶಾಸಕರಿಗೆ ಆಫರ್ ಮಾಡ್ತಿದ್ದಾರೆ. ಅವರಿಗೆ ಎಲ್ಲಿಂದ ಈ ಹಣ ಬರುತ್ತಿದೆ? ಎಷ್ಟೇ ಆಫರ್ ನೀಡಿದರು ನಮ್ಮ ಶಾಸಕರು ಹೋಗೋದಿಲ್ಲ. ಬಿಜೆಪಿಯವರಿಗೆ ಅಧಿಕಾರದ ಭ್ರಮೆ ಹಿಡಿದಿದೆ ಎಂದಿದ್ದಾರೆ .










