ಚಾಲಕನ ನಿಯಂತ್ರಣ ತಪ್ಪಿ ದಂಟರಮಕ್ಕಿ ಕೆರೆಗೆ ಉರುಳಿದ ಶಿಫ್ಟ್ ಕಾರು…

656
firstsuddi

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರು ಕೆರೆಗೆ ಉರುಳಿದ ಘಟನೆ ನಗರದ ದಂಟರಮಕ್ಕಿ ಕೆರೆಯಲ್ಲಿ ನಡೆದಿದ್ದು,
ಕಾರಿನಲ್ಲಿದ್ದ ಇಬ್ಬರು ಹಾಸನ ಮೂಲದ ವಿಜಯ್ ಕುಮಾರ್, ಬೋರೇಗೌಡ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಅಪಾಯದಿಂದ ಇಬ್ಬರು ಪಾರಾಗಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.