ತಿರುನೆಲ್ವೇಲಿ: ಗಣ್ಯ ನಾಯಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಸಲಹೆಯನ್ನು ನೀಡುತ್ತಾರೆ ಆದರೆ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಲ್ಲಿ ಓದಿಸುತ್ತಾರೆ. ಆದರೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರು ತಮ್ಮ ಮಗಳನ್ನು ಅಂಗನವಾಡಿಗೆ ಸೇರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸರ್ಕಾರಿ ಶಾಲೆಗಳ ಬಗೆಗಿನ ನಿರ್ಲಕ್ಷ್ಯವನ್ನು ನಿರ್ಮೂಲನೆ ಮಾಡಲು ಈ ನಿರ್ಧಾರವನ್ನು ಮಾಡಿದ್ದು, ಅಂಗನವಾಡಿಯಲ್ಲಿ ಎಲ್ಲಾ ಸೌಲಭ್ಯಗಳಿವೆ. ಸಮಾಜದ ಎಲ್ಲಾ ರೀತಿಯ ಜನಗಳ ಜೊತೆ ನನ್ನ ಮಗಳು ಸೇರಬೇಕು. ಅವರ ಜೊತೆ ಸೇರಿ ಕಲಿಯಬೇಕು. ಹೀಗಾಗಿ ನರ್ಸರಿ ಶಾಲೆ ಬದಲು ಅಂಗನವಾಡಿಗೆ ಸೇರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಅವರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.










