ಕಬ್ಬಿಣದ ರಾಡ್ ತುಂಬಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ-ಕಂಡಕ್ಟರ್ ದೇಹಕ್ಕೆ ಚುಚ್ಚಿದ ಕಬ್ಬಿಣದ ರಾಡುಗಳು…

137
firstsuddi

ಬಳ್ಳಾರಿ : ಕಬ್ಬಿಣದ ರಾಡುಗಳು ತುಂಬಿದ್ದ ಲಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದು ಕಂಡಕ್ಟರ್ ದೇಹಕ್ಕೆ ಕಬ್ಬಿಣದ ರಾಡುಗಳು ಚುಚ್ಚಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ಹೊರವಲಯದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕಬ್ಬಿಣದ ರಾಡುಗಳು ತುಂಬಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‍ನ ಎಡಭಾಗದಲ್ಲಿ ಕುಳಿತಿದ್ದ ಕಂಡಕ್ಟರ್ ದೇಹಕ್ಕೆ ಕಬ್ಬಿಣದ ರಾಡುಗಳು ಚುಚ್ಚಿದ್ದು, ಕೂಡಲೇ ಸ್ಥಳೀಯರು ಕಂಡಕ್ಟರ್ ದೇಹಕ್ಕೆ ಚುಚ್ಚಿದ್ದ ರಾಡುಗಳನ್ನು ಕತ್ತರಿಸಿದ್ದು, ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕೂಡಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.