ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಯಿಂದ ನಟ, ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರನ್ನು ಕೈ ಬಿಡಲಾಗಿದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಜೊತೆ ಜೊತೆಯಲ್ಲಿ ಸೆಟ್ ನಲ್ಲಿ ಅನಿರುದ್ಧ್ ಮಾಡ್ತಿದ್ದ ಕಿರಿಕಿರಿಯಿಂದ ಇಡೀ ತಂಡವೇ ಬೇಸತ್ತು ಹೋಗಿತ್ತು. ಹೀಗಾಗಿ ಅನಿರುದ್ಧ್ ರನ್ನು ಸೀರಿಯಲ್ನಿಂದ ಮಾತ್ರವಲ್ಲ ಕಿರುತೆರೆಯಿಂದಲೇ ಬ್ಯಾನ್ ಮಾಡಲಾಗಿದೆಯಂತೆ.
ಈ ಬಗ್ಗೆ ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕರಾದ ಆರೂರು ಜಗದೀಶ್ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ಕೊಟ್ಟಿದ್ದಾರೆ. ದೂರಿನ ಮೇರೆಗೆ ಕಿರುತೆರೆ ನಿರ್ಮಾಪಕ ಸಂಘ ಸಭೆ ಸೇರಿ ಇನ್ಮುಂದೆ ಅನಿರುದ್ಧ್ ಅವರಿಗೆ ಕಿರುತೆರೆಯಲ್ಲಿ ಅವಕಾಶ ಕೊಡಬಾರದು ಅಂತ ನಿರ್ಧರಿಸಲಾಗಿದೆ.
ಧಾರಾವಾಹಿಯ ತಂಡದ ಸದಸ್ಯರು ಹೇಳುವಂತೆ, ಅನಿರುದ್ಧ್ ಅವರು ಹಲವು ತಿಂಗಳಿಂದ ತಂಡದೊಂದಿಗೆ ಕಿರಿಕಿರಿ ಮಾಡುತ್ತಲೇ ಇದ್ದರಂತೆ. ಶೂಟಿಂಗ್ ಗೆ ತಡವಾಗಿ ಬರುವುದು, ಡೇಟ್ ಕೊಡದೇ ಇರುವುದು ಹಾಗೂ ಬರೆದ ಡೈಲಾಗ್ ಅನ್ನು ಹೇಳದೇ ಇರುವುದು ಹೀಗೆ ನಾನಾ ರೀತಿಯ ತೊಂದರೆಗಳನ್ನು ಮಾಡುತ್ತಲೇ ಇದ್ದರಂತೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆಯಂತೆ.










