ಚಿಕ್ಕಮಗಳೂರು :- ಕಾಫಿ ನಾಡು ಒಬ್ಬ ಉತ್ತಮ, ಸರಳ ಹಾಗೂ ಸಜ್ಜನಿಕೆಯ ಉದ್ಯಮಿಯನ್ನು ಕಳೆದುಕೊಂಡಿದೆ : ಎಸ್.ಎಲ್.ಭೋಜೇಗೌಡ…

410
firstsuddi

ಚಿಕ್ಕಮಗಳೂರು :- ಭಾರತದ ಪ್ರಸಿದ್ಧ ಕೆಫೆ ಕಾಫಿ ಡೇ(ಸಿಸಿಡಿ) ಮಾಲೀಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ರವರ ಅಳಿಯ ಶ್ರೀ ವಿ.ಜಿ.ಸಿದ್ದಾರ್ಥ ಹೆಗಡೆ ಯವರ ಅಗಲಿಕೆಯಿಂದ ಚಿಕ್ಕಮಗಳೂರು ಜಿಲ್ಲೆ ಹಾಗೂ ಕಾಫಿ ನಾಡು ಒಬ್ಬ ಉತ್ತಮ, ಸರಳ ಹಾಗೂ ಸಜ್ಜನಿಕೆಯ ಉದ್ಯಮಿಯನ್ನು ಕಳೆದುಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.
ಸಿದ್ಧಾರ್ಥ ರವರ ಅಗಲಿಕೆಯಿಂದ ನಾಡಿನ ಜನತೆಗೆ ತುಂಬಲಾರದ ನಷ್ಟವುಂಟಾಗಿದೆ. ಚಿಕ್ಕಮಗಳೂರಿನ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದು ತನ್ನದೇ ಆದ ಉದ್ಯಮವನ್ನು ಕಟ್ಟಿ ಬೆಳೆಸಿ ನಾಡಿನ ಸುಮಾರು 50 ಸಾವಿರಕ್ಕೂ ಹೆಚ್ಚು ಯುವ ಜನರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ನೀಗಿಸುವಲ್ಲಿ ಅತ್ಯಂತ ಪ್ರಮುಖಪಾತ್ರವಹಿಸಿ ಲಕ್ಷಾಂತರ ಜನರಿಗೆ ಅನ್ನದಾತರಾಗಿದ್ದ ಸಿದ್ಧಾರ್ಥರವರು ಸಾವಿನ ಕಟು ನಿರ್ಧಾರ ತೆಗೆದುಕೊಳ್ಳಲು ಏನು ಕಾರಣ ಎಂಬುವುದರ ಕುರಿತು ಸಮಗ್ರ ತನಿಖೆ ನಡೆಯಬೇಕು ಹಾಗೂ ಆದಾಯ ತೆರಿಗೆ ಇಲಾಖೆಯಿಂದ ಸಿದ್ಧಾರ್ಥ ರವರಂತಹ ಯಶಸ್ವಿ ಉಧ್ಯಮಿಗೆ ಆಗಿರುವ ಕಿರುಕುಳದ ಹಿಂದಿನ ಮರ್ಮ ಏನು ಎಂದು ತಿಳಿಯುವ ಹಕ್ಕು ನಾಡಿನ ಜನತೆಗೆ ಇರುವುದರಿಂದ ಕೂಡಲೇ ಸರ್ಕಾರ ಸಮಗ್ರ ತನಿಖೆಗೆ ಆದೇಶಿಸಬೇಕಾಗಿದೆ.
ಸಿದ್ಧಾರ್ಥರವರ ಅಗಲಿಕೆ ಅವರ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ನಾಡಿಗೆ ಅತ್ಯಂತ ನೋವು ತಂದಿದ್ದು ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದು ಎಸ್.ಎಲ್. ಭೋಜೇಗೌಡ ತಿಳಿಸಿದ್ದಾರೆ.