ಚಿಕ್ಕಮಗಳೂರು : ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆಯಾಗದ ಹಿನ್ನೆಲೆ, ಈ ಬಾರಿ ಮಲೆನಾಡಿನಲ್ಲೇ ಮಳೆಗಾಗಿ ರೈತರು ಋಷ್ಯಶೃಂಗ ದೇವರ ಮೊರೆ ಹೋಗಿದ್ದು, ಕಳೆದ ಒಂದು ವಾರದಿಂದ ಮಳೆ ಸಂಪೂರ್ಣವಾಗಿ ಕ್ಷೀಣಿಸಿದ್ದು, ಕೊಪ್ಪ, ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರಿನಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದು, ಹೇಮಾವತಿ, ತುಂಗಾಭದ್ರಾ ಹಾಗೂ ವೇದಾವತಿ ಹರಿವಿನಲ್ಲಿ ದಿಢೀರ್ ಕುಸಿತ ಕಂಡಿದ್ದು, ಅಪ್ಪಟ ಮಳೆಗಾಲದಲ್ಲೂ ಬೇಸಿಗಯಂತಹ ವಾತಾವರಣವಿದ್ದು, ಮಲೆನಾಡಿನ ರೈತರು ಆತಂಕಗೊಂಡು ಮಳೆಗಾಗಿ ಮಳೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.










