ಡಿಸಿಎಂ ಕಾರಜೋಳ ಕ್ಷೇತ್ರದ ರಸ್ತೆಯ ದುಸ್ಥಿತಿಯನ್ನು ಅಣಕಿಸಿ ಫೋಟೋಶೂಟ್ ಮಾಡಿಸಿದ ದಂಪತಿ…

307
firstsuddi

ಬಾಗಲಕೋಟೆ : ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದ ರಸ್ತೆಗಳ ದುಸ್ಥಿತಿಯನ್ನು ಅಣಕಿಸಿ ಜನಪ್ರತಿನಿಧಿಗಳಿಗೆ ತಿಳಿಸಲು ದಂಪತಿ ಹಾಗೂ ಮಗ ಫೋಟೋಶೂಟ್ ಮಾಡಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಜಿಲ್ಲೆಯ ಮುಧೋಳ ನಗರದ ರಸ್ತೆಯ ತಗ್ಗು ಗುಂಡಿಗಳಲ್ಲಿ ದಂಪತಿ ವಿಭಿನ್ನವಾಗಿ ಫೊಟೋಶೂಟ್ ಮಾಡಿಸಿದ್ದು, ಇದನ್ನು ನೋಡಿದ ಸಾರ್ವಜನಿಕರೂ ಇನ್ನಾದರೂ ರಸ್ತೆ ಸರಿ ಮಾಡಿ ಎಂದು ಜನಪ್ರತಿನಿಧಿಗಳ ಕಾಲೆಳೆಯುತ್ತಿದ್ದಾರೆ.  ತಾಯಿ ಮಗನೊಂದಿಗೆ ಬೈಕಿನಲ್ಲಿ ಹದಗೆಟ್ಟಿರುವ ರಸ್ತೆಯಲ್ಲಿ ಹೋಗುತ್ತಿರುವ ಫೋಟೋ, ಹದಗೆಟ್ಟ ರಸ್ತೆ ಮೇಲೆ ದಂಪತಿ ಕುಳಿತ ಪೋಟೋ, ಮಳೆ ಬಂದು ನಿಂತ ನೀರಿನಲ್ಲಿ ಮಕ್ಕಳು ದೋಣಿ ಮಾಡಿ ಬಿಡುವ ಫೋಟೋ, ತಗ್ಗು ಗುಂಡಿ ಮೇಲೆ ಮಲಗಿರುವ ಫೋಟೋ, ತಗ್ಗು ಗುಂಡಿಯ ಅಕ್ಕಪಕ್ಕ ದಂಪತಿ ಕೈ ಹಿಡಿದು ನಿಂತಿರುವ ಫೋಟೋ, ಹೀಗೆ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದ ರಸ್ತೆಯಲ್ಲಿ ದಂಪತಿ ಫೋಟೋಶೂಟ್ ಮಾಡಿಸಿರುವುದು ವಿಶೇಷವಾಗಿದೆ.