ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ ನಿರ್ಬಂಧ : ಸಚಿವ ಸುಧಾಕರ್.

64
firstsuddi

ಬೆಂಗಳೂರು : ನೈಟ್ ಕರ್ಫ್ಯೂ ಬಗ್ಗೆ ಜನರಿಗೆ ಅಸಮಾಧಾನವಾಗುತ್ತಿರುವ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್ ಅವರು, ತಾಂತ್ರಿಕ ಸಲಹಾ ಸಮಿತಿ ನೀಡಿದ ಶಿಫಾರಸ್ಸಿನ ಮೇರೆಗೆ ನಿರ್ಬಂಧ ಹೇರಲಾಗಿದೆಯೇ ಹೊರತು, ಯಾವುದೇ ವ್ಯಾಪಾರ ಚಟುವಟಿಕೆಗೆ ಕಡಿವಾಣ ಹಾಕುವುದರಿಂದ ನಮಗೇನು ಸಂತೋಷ ತರೋದಿಲ್ಲ. ನಿಷೇಧಿಸಿದರೆ ನಮಗೇನಾದರೂ ಲಾಭ ಇದ್ಯಾ, ಬದಲಿಗೆ ಜನರ ಒಳಿತಿಗಾಗಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಜನರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಎಲ್ಲರೂ ಸಹಕರಿಸಬೇಕು. ನೈಟ್ ಕರ್ಫ್ಯೂ ಸದ್ಯ 10 ದಿವಸಕ್ಕೆ ಮಾಡಿದ್ದೇವೆ. 10-14 ದಿನಗಳ ಕಾಲ ಆದ ನಂತರ ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ತೀವಿ ಎಂದರು.

ಬಸವರಾಜ ಬೊಮ್ಮಾಯಿಯವರ ನಾಯಕತ್ವದಲ್ಲಿ ಮತ್ತಷ್ಟು ರಾಜ್ಯದಲ್ಲಿ ಅಭಿವೃದ್ಧಿ ಯಾಗಲಿದೆ. ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಇದು ಇನ್ನಷ್ಟು ಗಟ್ಟಿಯಾಗಲಿದೆ. ವಿರೋಧ ಪಕ್ಷಗಳು ನಮ್ಮ ಸಾಧನೆ, ಆಡಳಿತ ಪರಿ ನೋಡಿ ಹತಾಶರಾಗುತ್ತಿದ್ದಾರೆ. ಬದಲಾವಣೆ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು. ಯಾರು ತಂಡದಲ್ಲಿ ಇರಬೇಕು, ಯಾರು ಇರಬಾರದು ಅನ್ನೋದನ್ನ ಅವರು ನಿರ್ಧಾರ ಮಾಡುತ್ತಾರೆ ಎಂದರು.