ಬಳ್ಳಾರಿ : ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರ ಎರಡನೇ ಕಾಲೋನಿಯಲ್ಲಿ ನಡೆದಿದೆ. ಗೌತಮ್(12) ಗಗನಾ(14) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಮೃತ ಮಕ್ಕಳು ಎಮ್ಮೆ ಮೇಯಿಸಲು ತೆರಳಿದ್ದಾರೆ. ಈ ವೇಳೆ ಎಮ್ಮೆ ನೀರು ಕುಡಿಯಲು ನದಿಯೊಳಗೆ ಹೋಗಿದ್ದು, ಮಕ್ಕಳು ಕೂಡಾ ಎಮ್ಮೆ ಹಿಂದೆಯೇ ಹೋಗಿದ್ದು, ಈಜು ಬಾರದೆ ಇಬ್ಬರು ಮಕ್ಕಳು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ನೀರಿಗಿಳಿದು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಕುರಿತು ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










