ದಯಮಾಡಿ ನನ್ನನ್ನು ಬದುಕಲು ಬಿಡಿ : ಅರುಣಾ ಕುಮಾರಿ.

117
firstsuddi

ಬೆಂಗಳೂರು : ನಟ ದರ್ಶನ್ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅರುಣಾ ಕುಮಾರಿಯವರು ಮೊದಲ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಅವರು ನನ್ನನ್ನು ಬಳಸಿಕೊಂಡಿದ್ದು ತಪ್ಪು ಅಂತಾ ಹೇಳಿದ್ದಾರೆ. ಚಾಟಿಂಗ್ 32 ಪೇಜ್ ಇದೆ ಎನ್ನುವುದು ಸುಳ್ಳು. ಇದು ಜನರಲ್ ಟಾಕ್ ಅಷ್ಟೇ. ಮಾರ್ಚ್ 30ರಿಂದ ನನಗೆ ಉಮಾಪತಿಯವರ ಜೊತೆ ಕಾಂಟ್ಯಾಕ್ಟ್ ಇದೆ. ಇದರಿಂದ ಉಮಾಪತಿ ಅವರಿಗೆ ಲಾಭನೋ ನಷ್ಟಾನೋ ಗೊತ್ತಿಲ್ಲ. ನಾನು ಲೋನ್ ಕೊಡಿಸುವುದಕ್ಕೆ ಭೇಟಿ ಮಾಡಿರೋದು ನಿಜ. ಆದರೆ, ಸಾಲ ಕೊಡಿಸಿಲ್ಲ. ದರ್ಶನ್ ಫಾರಂ ಹೌಸ್ ಗೆ ಹೋಗಿದ್ದೀನಿ, ನಾನು ಕಳ್ಳತನ ಮಾಡಿಲ್ಲ. ಯಾರಿಂದ ಯಾರಿಗೂ ಮೋಸ ಆಗಿಲ್ಲ. ನನಗೆ ದರ್ಶನ್ ಖಾತೆಯಿಂದ ಯಾವುದೇ ದುಡ್ಡು ಬಂದಿಲ್ಲ ಅಂತಾ ಅರುಣಾ ಕುಮಾರಿ ಸ್ಪಷ್ಟನೆ ನೀಡಿದ್ದಾರೆ.

ದರ್ಶನ್-ಉಮಾಪತಿ ಮಧ್ಯೆ ಏನು ನಡೆದಿದೆ ಅಂತಾ ಗೊತ್ತಿಲ್ಲ. ಆದರೆ, ಇದರಿಂದ ನನಗೆ ತೊಂದರೆಯಾಗುತ್ತಿದೆ. ನನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ. ತುಂಬಾ ನೋವಿನಲ್ಲಿ ಮಾತನಾಡುತ್ತಿದ್ದೇನೆ. ಒಂದು ಹೆಣ್ಣು ಮಗಳನ್ನು ಈ ರೀತಿ ಅವಮಾನ ಯಾಕೆ ಮಾಡುತ್ತಿದ್ದೀರಿ. ದಯಮಾಡಿ ನನ್ನನ್ನು ಬದುಕಲು ಬಿಡಿ ಅಂತಾ ಕೇಳಿಕೊಂಡಿದ್ದಾರೆ.

15 ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು 25 ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ಆಪ್ತ ರಾಬರ್ಟ್ ನಿರ್ಮಾಪಕರಾದ ಉಮಾಪತಿ ಮಹಿಳೆಯನ್ನ ದರ್ಶನ್ ಬಳಿ ಕರೆದುಕೊಂಡು ಬಂದಿರುವ ಬಗ್ಗೆ ತಿಳಿದು ಬಂದಿದೆ. ಇನ್ನೂ ತಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿದ್ದಾರೆ ಎನ್ನಲಾದ ಎಲ್ಲ ಗೆಳೆಯರನ್ನು ದರ್ಶನ್ ವಿಚಾರಿಸಿದಾಗ ಮಹಿಳೆಯೇ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುವುದು ತಿಳಿದು ಬಂದಿದೆ.