ಬೆಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಂಗಳೂರಿನ ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಸುದೀರ್ಘವಾದ 1500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ.
ಎನ್‍ಐಎ ಪರ ವಕೀಲರಾದ ಪಿ.ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. 1,500 ಪುಟಗಳ ಚಾರ್ಜ್ಶೀಟ್ ನಲ್ಲಿ 240 ಸಾಕ್ಷಿಗಳ ಹೇಳಿಕೆಗಳು ಸೇರಿ ಒಟ್ಟು 20 ಆರೋಪಿಗಳ ಹೆಸರು ಉಲ್ಲೇಖಿಸಲಾಗಿದೆ. ಇನ್ನು ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಈವರೆಗೆ 14 ಆರೋಪಿಗಳನ್ನು ಬಂಧಿಸಿಲಾಗಿದ್ದು, 6 ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಎನ್ ಐಎ ಚಾರ್ಜ್‍ಶೀಟ್‍ನಲ್ಲಿ ಸ್ಫೋಟಕ ಮಾಹಿತಿ ಬಯಲು : 2047ಕ್ಕೆ ಮುಸ್ಲಿಂ ಆಡಳಿತ ಜಾರಿಗೆ ತರುವ ಉದ್ದೇಶವನ್ನು ಪಿಎಫ್‍ಐ ಹೊಂದಿತ್ತು. ಇದಕ್ಕಾಗಿ ಸಮಾಜದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನ ನಡೆಸುತ್ತಿತ್ತು. ಪಿಎಫ್‍ಐನ ಪ್ರಮುಖ ನಾಯಕರು ಸಭೆ ನಡೆಸಿ ಯಾರನ್ನ ಕೊಲೆ ಮಾಡಬೇಕು ಎಂದು ನಿರ್ಧಾರ ಮಾಡುತ್ತಿದ್ದರು. ಇದಕ್ಕಾಗಿ ಕಿಲ್ಲಿಂಗ್ ಸ್ಕ್ವಾಡ್ಸ್ ನ್ನ ಮಾಡಿಕೊಂಡು ಕಾರ್ಯಾಚರಣೆ ಮಾಡುತ್ತಿತ್ತು. ಅದರಂತೆ ಆರೋಪಿಗಳು ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ ಬೆಂಗಳೂರು, ಸುಳ್ಯ ಹಾಗೂ ಬೆಳ್ಳಾರೆಯಲ್ಲಿ ಸಭೆಗಳನ್ನ ಮಾಡಿದ್ದರು.
ಪಿಎಫ್‍ಐನ ಇಸ್ಲಾಮಿಕ್ ಆಡಳಿತವನ್ನ ಜಾರಿಗೆ ತರಲು ಅಡ್ಡಿಯಾಗುವ ವ್ಯಕ್ತಿಗಳನ್ನ ಶತ್ರುಗಳು ಎಂದು ಗುರುತಿಸಲಾಗುತ್ತಿತ್ತು. ಇಂತಹವರನ್ನ ಕೊಲೆ ಮಾಡುವ ಕೆಲಸವನ್ನ ಈ ಸರ್ವಿಸ್ ಟೀಮ್ ಅಥವಾ ಕಿಲ್ಲಿಂಗ್ ಸ್ಕ್ವಾಡ್ ಮಾಡುತ್ತಿತ್ತು. ಈ ಕಿಲ್ಲಿಂಗ್ ಸ್ಕ್ವಾಡ್‍ಗೆ ಶಸ್ತ್ರಾಸ್ತ್ರ ನೀಡಿ ತರಬೇತಿ ನೀಡಲಾಗುತ್ತಿತ್ತು. ಕೊಲೆ ಹೇಗೆ ಮಾಡಬೇಕು ಪುನಃ ಹೇಗೆ ತಪ್ಪಿಸಿಕೊಳ್ಳಬೇಕು ಎಲ್ಲದರ ಬಗ್ಗೆಯೂ ತರಬೇತಿ ನೀಡಲಾಗುತ್ತಿತ್ತು. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನ ಗುರುತಿಸಿ ಕೊಲೆ ಮಾಡಿದ ಬಳಿಕ ಅಷ್ಟೇ ಸುಲಭವಾಗಿ ಎಸ್ಕೇಪ್ ಆಗುವ ತರಬೇತಿಯನ್ನ ಕಿಲ್ಲಿಂಗ್ ಸ್ಕ್ವಾಡ್ ಪಡೆದುಕೊಂಡಿತ್ತು. ಒಟ್ಟಿನಲ್ಲಿ 7 ಹಿಂದೂಗಳಲ್ಲಿ ಇಬ್ಬರ ಹತ್ಯೆಗೆ ಪ್ಲಾನ್ ಮಾಡಲಾಗಿತ್ತು.
ಬಂಟ್ವಾಳ ತಾಲೂಕಿನ ಕೊಡಾಜೆಯ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಸಂಘಟನೆಯ ಷರೀಫ್ ಮತ್ತು ನೆಕ್ಕಿಲಾಡಿಯ ಅಗ್ನಾಡಿ ಹೌಸ್ ನ ಅಬೂಬಕರ್ ಮಗ ಮಸೂದ್ ಕೆ.ಎ ಆರೋಪಿಗಳ ಸುಳಿವು ನೀಡಿದವರಿಗೆ ತಲಾ 5 ಲಕ್ಷದಂತೆ ಇಬ್ಬರಿಂದ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್ ಐಎ ಅಧಿಕಾರಿಗಳು ನಿನ್ನೆ ಘೋಷಣೆ ಮಾಡಿದ್ದು, ಆರೋಪಿಗಳ ಸುಳಿವು ಸಿಕ್ಕರೆ ಬೆಂಗಳೂರಿನ ಎನ್ ಐಎ ಎಸ್ ಪಿ ಕಚೇರಿಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.










