ಪ್ರಶಾಂತ್ ಸಂಬರ್ಗಿ ಒಬ್ಬ ರಾಜಕೀಯ ಕಾರಣಕ್ಕೆ ತಾಯಿಭಾಷೆ ಬಲಿಕೊಡುವ ನೆಲಹಿಡುಕ : ಚಂದ್ರಚೂಡ್.

79
firstsuddi

ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚಕ್ರವರ್ತಿ ಚಂದ್ರಚೂಡ್ ಅವರು, ಆರೋಪಗಳ ಸುರಿಮಳೆ ಗೈದಿದ್ದಾರೆ.

ಪ್ರಶಾಂತ್ ಸಂಬರ್ಗಿ ಒಬ್ಬ ರಾಜಕೀಯ ಕಾರಣಕ್ಕೆ ತಾಯಿಭಾಷೆ ಬಲಿಕೊಡುವ ನೆಲಹಿಡುಕ. ಬಿಜೆಪಿ ಪಕ್ಷ ಸೇರಲು ಪಡಬಾರದ ಪ್ರಚಾರದ ಗಿಮಿಕ್ ನಡೆಸುತ್ತಿರುವ ಓರ್ವ ನೆಲಹಿಡುಕ. ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ, ಕನ್ನಡ ವಿರೋಧಿ. ಸಂಬರ್ಗಿಯ ಹೋರಾಟವೆಲ್ಲಾ ಸುಳ್ಳು. ಸಂಬರ್ಗಿ ಒಬ್ಬ ಮೋಸಗಾರ. ಮೀಟೂ ಕೇಸ್ ಅಲ್ಲಿ ಕೋಟ್ಯಂತರ ಹಣ ಪಡೆದ, ಅರ್ಜುನ್ ಸರ್ಜಾ ಪರವಾಗಿ ಮಾತನಾಡಿದ. ಇದೂವರೆಗೂ ಒಂದೇ ಒಂದು ಸಾಕ್ಷ್ಯವನ್ನು ಕೊಟ್ಟಿಲ್ಲ. ರಾಗಿಣಿ, ಸಂಜನಾ, ಜಮೀರ್ ಅಹಮದ್ ವಿರುದ್ಧ ಮಾತನಾಡಿದ ಬಳಿಕ ಸಿಸಿಬಿಯ ಕಚೇರಿಯಲ್ಲಿ ಖಾಲಿ ಫೈಲ್ ಹಿಡ್ಕೊಂಡು ಓಡಾಡಿದ. ಇನ್ಸ್ಪೆಕ್ಟರ್, ಡಿಸಿಪಿ ಚೇಂಬರ್ ಗೆ ಹೋಗಿ ಕಾಲಹರಣ ಮಾಡಿ ಬಂದ ಅಷ್ಟೇ. ಸ್ನೇಹಿತನೊಬ್ಬನಿಗೆ ಕಾರು ಕೊಡ್ತಿಸ್ತೀನಿ ಅಂತ ತಾನೇ ಕಾರನ್ನು ಇಟ್ಟುಕೊಂಡು. ಬಳಿಕ ಕಾರು ತೆಗೆದುಕೊಳ್ಳಲು ಬಂದ ಸ್ನೇಹಿತನಿಗೆ ಮೋಸ ಮಾಡಿದ ಎಂದು ಆರೋಪಿಸಿದ್ದಾರೆ.

ಈ ಸಂಧರ್ಭಕ್ಕೆ ಇಂತಹದೊಂದು ವಿವರಣೆ ಬರೆಯದೇ ಹೋದರೆ ಕಲಿತ ಪತ್ರಿಕೋದ್ಯಮಕ್ಕೆ ಅಗೌರವ. ಆತನಿಗೆ ಆಗತಾನೇ ರೆಬೆಲ್ ಸ್ಟಾರ್ ಅಂಬರೀಶ್ ಯಾವನೋ ಅವನು ಕಳಿಸೋ ಆಚೆಗೆ ಅವನಿಗೂ ಸಿನಿಮಾ ಇಂಡಸ್ಟ್ರೀಗೂ ಸಂಬಂಧವೇನೂ ಅಂತ ಉಗಿದು ಛೇಂಬರಿನಲ್ಲಿ ನಡೆಯುತ್ತಿದ್ದ ಮೀಟಿಂಗ್ ನಿಂದ ಉಗಿದಟ್ಟಿದ್ದರು. ಕಂಡವರ ಬಗ್ಗೆ ಸುಳ್ಳು ಆಸ್ತಿಗಳನ್ನ ಕೇಳ್ತಾನೆ ರಾಗಿಣಿ, ಸಂಜನಾ, ಅನುಶ್ರೀ, ಜಮೀರ್ ಬಗ್ಗೆ ಈವರೆಗೆ ಈತ ಒಂದೇ ಒಂದು ಚೂರು ಮಾಹಿತಿ ಕೊಟ್ಟಿಲ್ಲ. ನಾಲ್ಕು ಬಾರಿ ಸಿಸಿಬಿಯ ಬಾತ್ ರೂಮ್ ಬಳಸಿ ಬಂದನೇ ಹೊರತು ಯಾವ ಸಣ್ಣ ಮಾಹಿತಿಯೂ ನೀಡಿಲ್ಲ. ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು, ಖ್ಯಾತ ಗಾಯಕ ರಘು ದೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ ಗಿಂಡಿಮಾಣಿ ಪ್ರಶಾಂತ್ ಸಂಬರ್ಗಿ. ರೋವರ್ ಕಾರ್ ಪಡೆದು ಸ್ನೇಹಿತನಿಗೆ ರಾತ್ರೋ ರಾತ್ರಿ ವಿಶ್ವಾಸ ದ್ರೋಹವೆಸಗಿದ ಆಸಾಮಿ ಅವನು ಎಂದು ಪುಟಗಟ್ಟಲೆ ಕಮೆಂಟ್ ಮಾಡಿರುವ ಚಕ್ರವರ್ತಿ ಚಂದ್ರಚೂಡ್, ಸಂಬರ್ಗಿಯ ಇಡೀ ಚರಿತ್ರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.